Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ12 July 2021 12:10 AM IST
share
ಓ ಮೆಣಸೇ...

ನಮ್ಮಲ್ಲಿ ದುರಹಂಕಾರಿಗಳಿಗೆ ಕೋವಿಡ್ ಲಸಿಕೆ ಇಲ್ಲ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಎಲ್ಲ ಆಧುನಿಕ ಲಸಿಕೆಗಳನ್ನು ಮೀರಿದ ಅನೇಕ ಹಳೆಯ ರೋಗಗಳಿರುವ ಹಲವರು ಈಗಾಗಲೇ ನಿಮ್ಮಳಗಿದ್ದಾರಲ್ಲಾ!


ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷ ಬದಲಾವಣೆ ಮಾಡುವ ವ್ಯಕ್ತಿ ನಾನಲ್ಲ - ಎಂ.ಟಿ.ಬಿ.ನಾಗರಾಜ್, ಸಚಿವ
ಒಂದೊಂದು ಚುನಾವಣೆಯಲ್ಲಿ ಎರಡೆರಡು ಪಕ್ಷ ಬದಲಾಯಿಸಿದ ಪ್ರವೀಣರೇ ತುಂಬಿರುವಲ್ಲಿ ಕೇವಲ ಒಂದು ಪಕ್ಷ ಬದಲಿಸಿದವರಿಗೆ ಯಾವ ಬೆಲೆ ಇರುತ್ತೆ?


ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ ಸಿದ್ಧಾಂತ ಅಂದರೇನು ಎಂಬ ಬಗ್ಗೆ ನಿಮಗಿರುವಷ್ಟೇ ಶೂನ್ಯ ಜ್ಞಾನ ಅವರಿಗಿದ್ದರೂ ಪರವಾಗಿಲ್ಲ.


ಕಾಂಗ್ರೆಸ್‌ನಲ್ಲಿ ಈಗಿರುವ ಶಕ್ತಿ ಸಾಕಾಗುವುದಿಲ್ಲ ಹಾಗಾಗಿ ಅವರು ಆಮದು ಶಕ್ತಿಯ ಹುಡುಕಾಟದಲ್ಲಿದ್ದಾರೆ - ಬಸವರಾಜ ಬೊಮ್ಮಾಯಿ, ಸಚಿವ
ಪರೋಕ್ಷವಾಗಿ ನೀವು ‘ನಾನು ರಫ್ತಾಗಲು ಸಿದ್ಧ’ ಎಂದು ನಿಮ್ಮ ಪಕ್ಷಕ್ಕೆ ತಿಳಿಸುತ್ತಿಲ್ಲ ತಾನೇ?


ಡಿ.ವಿ.ಸದಾನಂದಗೌಡರು ತನ್ನ ವಿರುದ್ಧ ಯಾವುದೇ ವೀಡಿಯೊ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆ ಆದೇಶ ತಂದಿರುವುದು ‘ಕಳ್ಳನ ಮನಸ್ಸು ಹುಳ್ಳಗೆ’ ಎಂಬಂತಾಗಿದೆ - ಸಿದ್ದರಾಮಯ್ಯ, ಮಾಜಿ ಸಿಎಂ
ಪುಡಾರಿಗಳು ವೀಡಿಯೊಗಳ ಕುರಿತು ಮಾತನಾಡಬಾರದು. ಯಾರ ಸರದಿ ಯಾವಾಗ ಬರುತ್ತೆ ಎಂದು ಹೇಳಲಿಕ್ಕಾಗುತ್ತದೆಯೇ?


ಭ್ರಷ್ಟಾಚಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು -ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಪಕ್ಷ ಬಿಜೆಪಿಯ ಇನ್ನೊಂದು ಮುಖ ಎನ್ನುವ ವದಂತಿಗಳಿವೆ.


ಕಾಂಗ್ರೆಸ್‌ನಲ್ಲಿ ಪಂಚ ಕೌರವರು ಕಾಣ ಸಿಗುತ್ತಾರೆ - ಈಶ್ವರಪ್ಪ, ಸಚಿವ
ಒಬ್ಬನೇ ಕೌರವ ಕಾಣಿಸಬೇಕೆಂದಿದ್ದರೆ ಕಾಂಗ್ರೆಸನ್ನು ಬಿಟ್ಟು ಕನ್ನಡಿಯ ಮುಂದೆ ನಿಲ್ಲಿ.


ಪ್ರಧಾನಿ ಮೋದಿ ದುರಂಹಕಾರಕ್ಕೆ ಮೊದಲು ಲಸಿಕೆ ಕೊಡಿಸಿ - ಆರ್.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ
ಕಾಂಗ್ರೆಸ್‌ನ ನಿದ್ರಾವಸ್ಥೆಗೆ ಲಸಿಕೆ ಕೊಟ್ಟರೆ ಸರಿಯಾಗುತ್ತದೆ.


ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದು ಹೇಳುವವರು ಹಿಂದೂಗಳೇ ಅಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಅವರು ಮನುವಾದಿ ಸಂಘಿಗಳು.


ಬಿಜೆಪಿ ಹಾಗೂ ಶಿವಸೇನೆ ಶಾಶ್ವತ ಶತ್ರುಗಳಲ್ಲ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಾಜಿ ಸಿಎಂ
ಜನಸಾಮಾನ್ಯರ ಪಾಲಿಗೆ ಮಾತ್ರ ಶಾಶ್ವತ ಶತ್ರುಗಳು.


ಪಕ್ಷದ ಒಳಗೂ ಟೀಕೆ ಮಾಡುವ ಪ್ರವೃತ್ತಿ ಬಿಜೆಪಿಯಲ್ಲಿ ಮೂಡಿರುವುದು ನೋವಿನ ಸಂಗತಿ, ಇದು ಬಿಜೆಪಿ ಸಂಸ್ಕೃತಿ ಅಲ್ಲ - ಈಶ್ವರಪ್ಪ, ಸಚಿವ
ಬೊಗಳುವ ಸಂಸ್ಕೃತಿ ಬೆಳೆದು ಬಿಟ್ಟರೆ ಮತ್ತೆ ಅದನ್ನು ಒಂದೇ ದಿಕ್ಕಿಗೆ ಸೀಮಿತವಾಗಿ ಇಡಲಿಕ್ಕಾಗಲ್ಲ.


ಕಾಂಗ್ರೆಸ್ ಪದದಲ್ಲ್ಲಿರುವ ‘ಸಿ’ ಅಕ್ಷರವು ಕುತಂತ್ರಿ (ಕನ್ನಿಂಗ್) ಎಂಬುದನ್ನು ಪ್ರತಿನಿಧಿಸುತ್ತದೆ - ಮಾಯಾವತಿ, ಬಿಎಸ್ಪಿ ನಾಯಕಿ
ಸಂಘ ಸೇವೆಗಾಗಿ ಇಂಗ್ಲಿಷ್ ಕಲಿಯುವ ಕೋರ್ಸ್‌ಗೆ ಸೇರಿದ್ದೀರಾ?


ಒಂದು ತೊಟ್ಟು ರಕ್ತವೂ ಬೀಳದೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇದು ಬಿಜೆಪಿಯ ಸಾಧನೆ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ರಕ್ತದಾಹಿಗಳು, ಎಲ್ಲವನ್ನೂ ಹೀರಿಕೊಂಡು ಒಂದು ತೊಟ್ಟು ಕೂಡ ನೆಲಕ್ಕೆ ಬೀಳದಂತೆ ನೋಡಿಕೊಂಡರೆ?


ಮೇಕೆದಾಟು ಯೋಜನೆ ಜಾರಿಯ ವಿಷಯದಲ್ಲಿ ತಮಿಳುನಾಡನ್ನು ಕೇಳಿಕೊಂಡು ನಾವು ಮಸಾಲೆ ಅರೆಯಬೇಕಾಗಿಲ್ಲ - ಆರ್.ಅಶೋಕ್, ಸಚಿವ
ಮೋದಿಯನ್ನೊಮ್ಮೆ ಕೇಳಬೇಕಾದೀತು.


ರಾಜ್ಯದಲ್ಲಿ ನಮ್ಮದೇ ಸರಕಾರ ಅಧಿಕಾರದಲ್ಲಿದೆ ಎಂಬ ಭಾವನೆ ನನಗಿಲ್ಲ - ಸಿ.ಪಿ.ಯೋಗೇಶ್ವರ್, ಸಚಿವ
ಹಾಗೆಂದು ಮತ್ತೊಮ್ಮೆ ಪಕ್ಷಾಂತರ ಮಾಡಲಿದ್ದೀರಾ?


ಶಿವಸೇನೆ - ಬಿಜೆಪಿ ಬಾಂಧವ್ಯವು ಆಮಿರ್‌ಖಾನ್ - ಕಿರಣ್‌ರಾವ್ ಸಂಬಂಧದಂತೆ - ಸಂಜಯ್‌ರಾವತ್, ಶಿವಸೇನೆ ವಕ್ತಾರ
ವಿಚ್ಛೇದನ ಪಡೆದರೂ ಗುಟ್ಟಾಗಿ ಒಟ್ಟು ಸೇರುವಂತೆ.


ಸಂಗೀತ ಎಂದರೆ ಅದೊಂಥರ ಅಡುಗೆ ಮಾಡಿದ ಹಾಗೆ - ವಿ.ಮನೋಹರ್, ಸಂಗೀತ ನಿರ್ದೇಶಕ
ಹಾಳಾದಾಗ ಮಾತ್ರ ಇದನ್ನು ಮಾಡಿದ್ದು ಯಾರೆಂದು ಜನ ಕೇಳ್ತಾರೆ.


ನಾನು ಮುಖ್ಯಮಂತ್ರಿ ಆಗಲೇಬೇಕು, ಪ್ರಧಾನ ಮಂತ್ರಿಯಾಗಲೂ ಪ್ರಯತ್ನಿಸುವೆ -ಉಮೇಶ್ ಕತ್ತಿ, ಸಚಿವ
ಮೊದಲು ಪ್ರಧಾನಿಯಾದರೆ, ಮುಖ್ಯಮಂತ್ರಿ ಪದ ಸುಲಭವಾಗಿ ಕೈಸೇರುತ್ತದೆ.


ಕೆಆರ್‌ಎಸ್ ಸೋರಿಕೆಯಾಗುತ್ತಿದ್ದರೆ ಸಂಸದೆ ಸುಮಲತಾರನ್ನು ಅಲ್ಲಿ ಅಡ್ಡವಾಗಿ ಮಲಗಿಸಿ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ತಮ್ಮ ಸುಪುತ್ರರನ್ನು ಮಲಗಿಸಿದರೆ ಇನ್ನಷ್ಟು ಪರಿಣಾಮಕಾರಿ ಅಲ್ಲವೇ?


ಉತ್ತರ ಪ್ರದೇಶದಲ್ಲಿ ಎಸ್ಪಿಅಥವಾ ಬಿಎಸ್ಪಿಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಮರ್ಥ್ಯವನ್ನು ಕಾಂಗ್ರೆಸ್ ಹೊಂದಿದೆ - ಅಜಯ್‌ಕುಮಾರ್ ಲಲ್ಲು, ಉ.ಪ್ರ.ಕಾಂಗ್ರೆಸ್ ಅಧ್ಯಕ್ಷ
ಗೆಲ್ಲುವ ಸಾಮರ್ಥ್ಯದ ಬಗ್ಗೆ ಮಾತ್ರ ಅನುಮಾನ ಇರಬೇಕು.


ನಾನು ಎಂದೂ ಮಠವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮಠವೇ ನಿಮ್ಮನ್ನು ಬಳಸಿಕೊಂಡಿರಬೇಕು.


ಸಿಎಂ ಯಡಿಯೂರಪ್ಪರನ್ನು ಟೀಕಿಸುವವರು ಅವರ ಕಾಲಿನ ಧೂಳಿಗೂ ಸಮವಲ್ಲ - ಎಸ್.ಟಿ.ಸೋಮಶೇಖರ್, ಸಚಿವ
ಅದಕ್ಕೆ ಇರಬೇಕು ನೀವು ಧೂಳಿನಲ್ಲಿ ಹೊರಳಾಡುತ್ತಿರುವುದು.


ಬಾಲಿವುಡ್ ಸ್ಟಾರ್‌ಗಳನ್ನು ಮದುವೆಯಾಗದ ನನ್ನ ಅದೃಷ್ಟಕ್ಕೆ ನಾನು ಚಿರಋಣಿಯಾಗಿದ್ದೇನೆ - ಸೋನಂ ಕಪೂರ್, ನಟಿ
ಆ ಸ್ಟಾರ್‌ಗಳು ಕೂಡಾ ಅಷ್ಟೇ. ತಮಗೆ ಸಿಕ್ಕ ಮುಕ್ತಿಯನ್ನು ನೆನೆದುಕೊಂಡು ಸಿಲೆಬ್ರೇಟ್ ಮಾಡುತ್ತಿದ್ದಾರೆ.


ನಾನು ಚಾಮರಾಜಪೇಟೆ ಅಳಿಯ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅಳಿಯ ಮನೆ ತೊಳಿಯ ಎನ್ನುವ ಗಾದೆ ಅದಕ್ಕೆ ಹುಟ್ಟಿರಬೇಕು.


ಸಾಮರಸ್ಯ, ಸೋದರತ್ವ ಮತ್ತು ರಾಷ್ಟ್ರೀಯತೆಯೇ ಆರೆಸ್ಸೆಸ್‌ನ ಜೀವಾಳ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಶಾಂತಿ ಮತ್ತು ಅಹಿಂಸೆಯೇ ನನ್ನ ಜೀವನ ಮಂತ್ರ ಎಂದು ವೀರಪ್ಪನ್ ಹೇಳುತ್ತಿದ್ದನಂತೆ.


ಕಾಂಗ್ರೆಸ್ ಹಡಗಿಗೆ ತೂತು ಬಿದ್ದಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಈಗಾಗಲೇ ಮುಳುಗಿದೆ ಎಂದು ಕಾಂಗ್ರೆಸ್ ಮುಖಂಡರು ತಪ್ಪುತಿಳಿದಿದ್ದರಂತೆ.


ನಾಟಕ, ನಟನೆಯಲ್ಲಿ ಕುಮಾರಸ್ವಾಮಿಯನ್ನು ಮೀರಿಸುವವರು ಯಾರೂ ಇಲ್ಲ - ಸುಮಲತಾ, ಸಂಸದ
ಅವರ ಪ್ರತಿಭೆಯ ಮುಂದೆ ನೀವೂ ಮರುಳಾಗಿದ್ದಿರಾ?


ಪ್ರತಿಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರೂ ಇಲ್ಲ - ಮಾಧುಸ್ವಾಮಿ, ಸಚಿವ
ಆದ್ದರಿಂದ ಮತ್ತೆ ಮರಳಿ ಅಲ್ಲಿಗೆ ಹೊರಟಿದ್ದೀರಾ?


ಯಾರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ - ಸಿ.ಟಿ.ರವಿ, ಬಿಜೆಪಿ ಪ್ರ.ಕಾರ್ಯದರ್ಶಿ
ಸ್ವತಃ ತೋಡಿದ ಬಾವಿಗೆ ಬಿದ್ದು ಸತ್ತವರುಂಟು ಸರ್ವಜ್ಞ!

share
ಪಿ.ಎ.ರೈ
ಪಿ.ಎ.ರೈ
Next Story
X