ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಅಂಗರಕ್ಷಕನ ಸಾವಿನ ಪ್ರಕರಣ ಸಿಐಡಿಗೆ ಒಪ್ಪಿಸಿದ ಪಶ್ಚಿಮ ಬಂಗಾಳ

ಕೋಲ್ಕತಾ: 2018 ರಲ್ಲಿ ಸಂಭವಿಸಿದ ಬಿಜೆಪಿ ಪಕ್ಷದ ಶಾಸಕ ಸುವೇಂದು ಅಧಿಕಾರಿಯ ಅಂಗರಕ್ಷಕ ಸುಭಬ್ರತಾ ಚಕ್ರವರ್ತಿ ಅವರ ಸಾವಿನ ವಿಚಾರಣೆಯನ್ನು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ(ಸಿಐಡಿ) ಸೋಮವಾರ ವಹಿಸಿಕೊಂಡಿದೆ ಎಂದು Anandabazar Patrika ವರದಿ ಮಾಡಿದೆ. ಈ ತನಕ ರಾಜ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದರು.
ಪಶ್ಚಿಮ ಬಂಗಾಳ ಸಶಸ್ತ್ರ ಪೊಲೀಸ್ ಸಿಬ್ಬಂದಿಯ ಸದಸ್ಯರಾದ 40 ವರ್ಷದ ಚಕ್ರವರ್ತಿ ಅವರು ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಸಂಸದರಾದ ನಂತರ ಅವರ ಭದ್ರತಾ ತಂಡದ ಭಾಗವಾಗಿದ್ದರು. ಸುವೇಂದು 2015 ರಲ್ಲಿ ಪಶ್ಚಿಮ ಬಂಗಾಳ ಸರಕಾರದಲ್ಲಿ ಮಂತ್ರಿಯಾದ ನಂತರವೂ ಅವರ ಅಂಗರಕ್ಷಕರಾಗಿ ಮುಂದುವರೆದಿದ್ದರು.
ಅಕ್ಟೋಬರ್ 13, 2018 ರಂದು ಚಕ್ರವರ್ತಿ ಅವರು ಪೂರ್ವ ಮೇದಿನಿಪುರ ಜಿಲ್ಲೆಯ ಕಾಂತಿ ಪ್ರದೇಶದ ಪೊಲೀಸ್ ಬ್ಯಾರಕ್‌ನಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು Anandabazar Patrika ವರದಿ ಮಾಡಿದೆ
"ಸುವೇಂದು ಅಧಿಕಾರಿಯ ಅಂಗರಕ್ಷಕ ಸುಭಾಬ್ರತಾ ಚಕ್ರವರ್ತಿ ಅವರ ಸಾವಿನ ಬಗ್ಗೆ ಚಕ್ರವರ್ತಿ ಅವರ ಪತ್ನಿಯ ಪೊಲೀಸ್ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತೇವೆ" ಎಂದು ಅಪರಾಧ ತನಿಖಾ ವಿಭಾಗದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜುಲೈ 7 ರಂದು ಚಕ್ರವರ್ತಿ ಅವರ ಪತ್ನಿ ಸುಪರ್ಣ ಚಕ್ರವರ್ತಿ ತನ್ನ ಪತಿಯ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂತಿ ಪೊಲೀಸರಿಗೆ ಹೊಸ ದೂರು ಸಲ್ಲಿಸಿದ್ದರು.







