ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣ ಮಸೂದೆಯು ಸಾಂವಿಧಾನಿಕವಾಗಿ ಖಂಡನೀಯ: ವೆಲ್ಫೇರ್ ಪಾರ್ಟಿ
ಬೆಂಗಳೂರು, ಜು.12: ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಹಾಗೂ ಯೋಗಿ ಸರಕಾರದ ಉದ್ದೇಶ ಮತ್ತು ಮಸೂದೆ ಪರಿಚಯಿಸುವ ಸಂಯಮವನ್ನು ಪ್ರಶ್ನಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ತಿಳಿಸಿದ್ದಾರೆ.
ಉತ್ತರ ಪ್ರದೇಶ ಜನಸಂಖ್ಯೆ(ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ 2021ನ 2 ಮಕ್ಕಳ ನೀತಿ ಮತ್ತು ಅದರ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಗಳಾದ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹೊರಹಾಕುವುದು, ಸರಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವುದರಿಂದ ತಡೆಯುವುದು, ಸರಕಾರದ ಯಾವುದೇ ಸೌಲಭ್ಯ ಪಡೆಯುವುದರಿಂದ ತಡೆಯುವುದನ್ನು ಅವರು ಬಲವಾಗಿ ಖಂಡಿಸಿದ್ದಾರೆ.
ಮಾನವ ಸಂಪನ್ಮೂಲ ಯಾವುದೇ ದೇಶಕ್ಕಾಗಿ ಅಮೂಲ್ಯ ಸಂಪತ್ತು. ಹಾಗೂ ಬೇಡಿಕೆಗಳನ್ನು ಪೂರೈಸಲು ನಮ್ಮ ದೇಶದಲ್ಲಿ ಸಂಪನ್ಮೂಲಗಳ ಯಾವುದೇ ಕೊರತೆ ಇಲ್ಲ. ಆದರೆ ಸಮಾನ ಹಂಚಿಕೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರಸ್ತಾವಿತ ಮಸೂದೆ ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ಪ್ರಶ್ನಾರ್ಹವಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಶಬ್ದವನ್ನು ಸೃಷ್ಟಿಸುವುದು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಸಮಾಜದಲ್ಲಿ ಪೂರ್ವಗ್ರಹ ಮತ್ತು ಧಮಾರ್ಂಧತೆಯನ್ನು ಗಾಢವಾಗಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಜನಸಂಖ್ಯೆ ನಿಯಂತ್ರಣ ಮಸೂದೆಯು ಸಾಂವಿಧಾನಿಕವಾಗಿ ಹಾಗೂ ಕಾನೂನುಬದ್ಧವಾಗಿ ಪ್ರಶ್ನಾರ್ಹ. ಇದರ ಉದ್ದೇಶ ವಿಧಾನಸಭಾ ಚುನಾವಣೆ ಮೊದಲು ಗದ್ದಲ ಉಂಟು ಮಾಡುವುದರಿಂದ ಕೋಮು ಧ್ರುವೀಕರಣ ಮತ್ತು ಸಮಾಜದಲ್ಲಿ ಪಕ್ಷಪಾತ ಮತ್ತು ಧಮಾರ್ಂಧತೆ ಉಂಟಾಗುತ್ತದೆ ಎಂದು ಇಲ್ಯಾಸ್ ಪ್ರಕಟಣೆಯಲ್ಲಿ ಹೇಳಿದ್ದಾರೆ.





