ಕಾರು ಢಿಕ್ಕಿ: 5ರ ಹರೆಯದ ಬಾಲಕಿ ಮೃತ್ಯು

ಮೂಡುಬಿದಿರೆ: ರಸ್ತೆ ದಾಟುತ್ತಿದ್ದ 5ರ ಹರೆಯದ ಬಾಲಕಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಮಗು ಸಾವನಪ್ಪಿದ ಘಟನೆ ತೋಡಾರು ಸಮೀಪದ ಹಂಡೇಲಿನಲ್ಲಿ ಸೋಮವಾರ ಸಂಭವಿಸಿದೆ.
ಹಂಡೇಲಿನ ಅಬುಸ್ವಾಲಿಹ್ ಅವರ ಪುತ್ರಿ ಆಜ್ಮಾ ಫಾತಿಮಾ(5) ಮೃತಪಟ್ಟ ಬಾಲಕಿ. ಅಬುಸ್ವಾಲಿಹ್ ಅವರು ವಿದೇಶದಲ್ಲಿದ್ದು, ಇವರಿಗೆ ಅವಳಿ ಜವಳಿ ಹೆಣ್ಣು ಮಕ್ಕಳು. ಈ ಮಕ್ಕಳನ್ನು ಅಜ್ಜ ಹತ್ತಿರದ ಅಂಗಡಿಗೆಂದು ಕರೆದುಕೊಂಡು ಹೋಗಿದ್ದರು. ವಾಪಾಸು ಮನೆಗೆ ಕರೆದುಕೊಂಡು ಬರುತ್ತಿರುವಾಗ ದೇವಿ ನಗರ ಕ್ರಾಸ್ ಎಂಬಲ್ಲಿ ಆಜ್ಮಾ ಅಜ್ಜನ ಕೈಬಿಡಿಸಿಕೊಂಡು ನಿಧಾನವಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಬಂದ ಕಾರು ಮಗುವಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗದೆ. ಗಂಭೀರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದೆ ಎನ್ನಲಾಗಿದೆ.
ಕಾರು ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
Next Story





