ಲಡಾಖ್ ನ ದೆಮ್ಚುಕ್ ಪ್ರವೇಶಿಸಿ ದಲಾಯಿಲಾಮ ಜನ್ಮ ದಿನಾಚರಣೆಗೆ ಅಡ್ಡಿ ಪಡಿಸಿದ ಚೀನಾ ಯೋಧರು

ಫೋಟೊ ಕೃಪೆ: India Today
ಶ್ರೀನಗರ, ಜು. 12: ಭಾರತದ ಗ್ರಾಮ ನಿವಾಸಿಗಳು ದಲಾಯಿಲಾಮಾ ಅವರ ಜನ್ಮ ದಿನವನ್ನು ಆಚರಿಸುತ್ತಿರುವ ಸಂದರ್ಭ ಪ್ರತಿಭಟನೆಯಾರ್ಥ ಚೀನಾದ ಯೋಧರು ಹಾಗೂ ಕೆಲವು ನಾಗರಿಕರು ಲಡಾಖ್ ನ ದೇಮ್ಚುಕ್ ವಲಯದಲ್ಲಿರುವ ಸಿಂಧು ನದಿಯ ಇನ್ನೊಂದು ಬದಿಯಲ್ಲಿ ಕಾಣಿಸಿಕೊಂಡು ಬ್ಯಾನರ್ ಗಳನ್ನು ಹಾಗೂ ಚೀನಾದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಈ ಘಟನೆ ಜುಲೈ 6ರಂದು ನಡೆದಿದೆ.
ಯೋಧರು ಹಾಗೂ ನಾಗರಿಕರನ್ನು ಒಳಗೊಂಡ ಚೀನಿಯರು ಐದು ವಾಹನಗಳಲ್ಲಿ ಆಗಮಿಸಿದರು ಹಾಗೂ ದಲಾಲಾಮಾ ಅವರ ಜನ್ಮ ದಿನಾಚರಣೆ ಆಚರಿಸುತ್ತಿದ್ದ ಗ್ರಾಮದ ಸಮುದಾಯ ಕೇಂದ್ರದ ಸಮೀಪ ಬ್ಯಾನರ್ ಗಳನ್ನು ಎತ್ತಿ ಹಿಡಿದರು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ದಲಾಯಿಲಾಮಾ ಅವರ 86ನೇ ಜನ್ಮ ದಿನಾಚರಣೆಗೆ ಶುಭ ಹಾರೈಸಿದ್ದರು. 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ದಲಾಯಿಲಾಮಾ ಅವರೊಂದಿಗೆ ಮಾತನಾಡಿರುವುದು ಇದೇ ಮೊದಲು.
ಮಂಗಳವಾರ ಬೆಳಗ್ಗೆ ಮಾಡಲಾದ ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಅವರು, ‘‘86ನೇ ಜನ್ಮ ದಿನಾಚರಣೆಗೆ ಶುಭ ಕೋರಲು ದಲಾಯಿ ಲಾಮಾ ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದೆ. ನಾವು ಅವರ ದೀರ್ಘ ಹಾಗೂ ಆರೋಗ್ಯಕ್ಕಾಗಿ ಹಾರೈಸುತ್ತೇವೆ’’ ಎಂದಿದ್ದರು.
ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ದಲಾಯಿ ಲಾಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದು ದೇಶಭ್ರಷ್ಟ ಟಿಬೆಟ್ ಸರಕಾರದ ಅಧ್ಯಕ್ಷ ಪೆನ್ಪಾ ಸೆರಿಂಗ್ ಇಂಡಿಯಾ ಟುಡೆ ಟಿವಿಗೆ ಕಳೆದ ವಾರ ತಿಳಿಸಿದ್ದರು. ಪ್ರಧಾನಿ ಮೋದಿ ಅವರ ಟ್ವೀಟ್ ಟಬೇಟ್ ನೀತಿ ಕುರಿತ ಭಾರತದ ನಿಲುವಿನಲ್ಲಿ ಗಮನಾರ್ಹ ಬದಲಾವಣೆ ಆಗಿರುವುದನ್ನು ತೋರಿಸಿದೆ. ಅದೇ ರೀತಿ ಬೀಜಿಂಗ್ ಗೆ ಪ್ರಬಲ ಸಂದೇಶವೊಂದನ್ನು ನೀಡಿದೆ.







