ಮಹಿಳೆಗೆ ಕಿರುಕುಳ ಆರೋಪ: ಓರ್ವನ ಬಂಧನ
ಮಂಗಳೂರು, ಜು.12: ನಗರದ ಸೆಲೂನ್ ಮತ್ತು ಸ್ಪಾದಲ್ಲಿ ಮಹಿಳೆಯೋರ್ವರಿಗೆ ಕಿರುಕುಳ ನೀಡಿ, ಹಣ ಸುಲಿಗೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತಾವರದ ಅಬ್ದುಲ್ ದಾವೂದ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಆರೋಪಿಯು ಮಹಿಳೆಯ ಕುತ್ತಿಗೆ ಹಿಡಿದು 14,000 ರೂ. ನಗದನ್ನು ಸುಲಿಗೆ ಮಾಡಿ ಜೀವಬೆದರಿಕೆ ಹಾಕಿದ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Next Story





