ಬಂಡೀಪುರ ಸಂರಕ್ಷಿತಾರಣ್ಯ ದಲ್ಲಿ ಪುನರ್ವಸತಿ ಕೇಂದ್ರ ಸ್ದಾಪನೆಗೆ ವನ್ಯಜೀವಿ ಪ್ರಿಯರ ಒತ್ತಾಯ

ಗುಂಡ್ಲುಪೇಟೆ, ಜು12: ಬಂಡೀಪುರ ಸಂರಕ್ಷಿತಾರಣ್ಯ ದಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ತ್ವರಿತವಾಗಿ ರಕ್ಷಣೆ ಹಾಗೂ ಚಿಕಿತ್ಸೆಗೆ ನೆರವಾಗಲು ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.
ಜುಲೈ 9 ರಂದು ಗಾಯಗೊಂಡಿದ್ದ ಐದು ವರ್ಷದ ಗಂಡು ಹುಲಿಯನ್ನು ಸೆರೆಹಿಡಿಯಲಾಯಿತು ಆದರೆ ಕಾಡಿನಿಂದ 200 ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಚಿಕಿತ್ಸೆಗಾಗಿ ಹೋಗುವಾಗ ಅದು ಮೃತಪಟ್ಟಿತ್ತು .ಇದೊಂದೇ ಘಟನೆಯಲ್ಲದೆ ಇಂತಹ ಅನೇಕ ಘಟನೆಗಳು ಸಂಭವಿಸಿವೆ. ಪುನರ್ವಸತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗ, ಹುಲಿ, ಚಿರತೆ, ಆನೆಗಳು ಸೇರಿದಂತೆ ಅನೇಕ ವನ್ಯಜೀವಿಗಳು ಮೃತಪಟ್ಟಿವೆ. ಐದು ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಗಾಯಗೊಂಡ ಹುಲಿಯನ್ನು ಸೆರೆಹಿಡಿಯುವಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸ್ಟ್ಯಾಂಡರ್ಡ್ ಆಪರೇಷನ್ ಕಾರ್ಯವಿಧಾನವನ್ನು (ಎಸ್‌ಒಪಿ) ಅನುಸರಿಸಲಾಗಿಲ್ಲ ಎಂದು ವನ್ಯಜೀವಿ ಪ್ರಿಯರು ಆರೋಪಿಸಿದ್ದಾರೆ.
ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗುವಾಗ ಗಾಯಗೊಂಡ ಕಾಡು ಪ್ರಾಣಿಗಳು ಸಾಯುತ್ತಿರುವ ಘಟನೆಗಳು ವರದಿಯಾಗುತ್ತಿರುವ ಸಮಯದಲ್ಲಿ ಈ ರೀತಿಯ ಒತ್ತಾಯ ಕೇಳಿಬಂದಿದೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ವಲಯದಿಂದ ರಕ್ಷಿಸಲ್ಪಟ್ಟ 9 ವರ್ಷದ ಗಂಡು ಹುಲಿಯೊಂದು ಜೂನ್ 2018ರಲ್ಲಿ ಕೂರ್ಗಳಿ ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿತ್ತು.
ಬಂಡೀಪುರ ಅಭಯಾರಣ್ಯ ವ್ಯಾಪೀಯ ಗುಂಡ್ರವಲಯ ಅಥವಾ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ಕಾಡು ಪ್ರಾಣಿಗಳ ಪುನರ್ವಸತಿ ಕೇಂದ್ರ ಸ್ದಾಪನೆ ಮಾಡಲು ಅಂದಿನ ಬಂಡೀಪುರ ಸಿ.ಎಫ್. ಬಾಲಚಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ನಂತರ ದಿನಗಳ ಅವರು ನಿವೃತ್ತಿ ಹೊಂದಿದ ಕಾರಣದಿಂದಾಗಿ ನಂತರ ಬಂದಂತಹ ಅಧಿಕಾರಿಗಳು ಅತ್ತ ಗಮನಹರಿಸಲಿಲ್ಲ
ಹುಲಿ ಸಂರಕ್ಷಿತಾರಣ್ಯದಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಗಾಯಗೊಂಡ ಪ್ರಾಣಿಗಳಿಗೆ ಪ್ರಥಮ ಚಿಕಿತ್ತೆ ಮತ್ತಿತರ ತುರ್ತು ಚಿಕಿತ್ಸೆ ನೀಡಲು ನೆರವಾಗಲಿದೆ
ಡಾ. ಪ್ರಯಾಗ್
ಬೆಂಗಳೂರಿನ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್







