ಉಡುಪಿ: ಜು.14ಕ್ಕೆ ಕೋವಿಡ್-19 ಎರಡನೇ ಡೋಸ್ ಲಸಿಕೆ ಲಭ್ಯ
![ಉಡುಪಿ: ಜು.14ಕ್ಕೆ ಕೋವಿಡ್-19 ಎರಡನೇ ಡೋಸ್ ಲಸಿಕೆ ಲಭ್ಯ ಉಡುಪಿ: ಜು.14ಕ್ಕೆ ಕೋವಿಡ್-19 ಎರಡನೇ ಡೋಸ್ ಲಸಿಕೆ ಲಭ್ಯ](https://www.varthabharati.in/sites/default/files/images/articles/2021/07/13/298720-1626191986.gif)
ಸಾಂದರ್ಭಿಕ ಚಿತ್ರ
ಉಡುಪಿ, ಜು.13: ಜಿಲ್ಲೆಯಲ್ಲಿ ಜು.14ರಂದು ಉಡುಪಿ ನಗರ ಪ್ರದೇಶದ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್-19 ಎರಡನೇನೇ ಡೋಸ್ ಲಸಿಕೆ ಲಭ್ಯವಿದೆ.
ನಗರದ ಜಿಲ್ಲಾ ಆಸ್ಪತ್ರೆಯ ಸೇಂಟ್ ಸಿಸಿಲಿ ಶಾಲೆಯ ಲಸಿಕಾ ಕೇಂದ್ರದಲ್ಲಿ 2ನೇ ಡೋಸ್ ಕೋವಿಶೀಲ್ಡ್ 150 ಡೋಸ್, ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಧವ ಕೃಪಾ ಶಾಲೆಯ ಲಸಿಕಾ ಕೇಂದ್ರದಲ್ಲಿ 2ನೇ ಡೋಸ್ ಕೋವಿಶೀಲ್ಡ್ -150 ಡೋಸ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಲಂಕಾರ್ ಥಿಯೇಟರ್ ಬಳಿಯ ಹಳೆ ಕಟ್ಟಡದಲ್ಲಿ 2ನೇ ಡೋಸ್ ಕೋವಿಶೀಲ್ಡ್ 150 ಡೋಸ್, ಕುಕ್ಕಿಕಟ್ಟೆಯ ಎಫ್ಪಿಎಐನ ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರದಲ್ಲಿ 2ನೇ ಡೋಸ್ ಕೋವಿಶೀಲ್ಡ್ 100 ಡೋಸ್ ಲಭ್ಯವಿರುತ್ತದೆ. ಸಮಯ ಬೆಳಗ್ಗೆ 11:00ರಿಂದ ಸಂಜೆ 4:30ರವರೆಗೆ.
ಅದೇ ರೀತಿ ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 20ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ 100 ಡೋಸ್ ಲಸಿಕೆಯನ್ನು ಬೆಳಗ್ಗೆ 11:00ರಿಂದ ಸಂಜೆ 4:30 ರವರೆಗೆ ನೀಡಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.