ಕೇರಳದಿಂದ ಆಗಮಿಸುವವರ ತಪಾಸಣೆಗೆ 10 ಚೆಕ್‌ಪೋಸ್ಟ್

ಮಂಗಳೂರು, ಜು.13: ಕೇರಳದಿಂದ ದ.ಕ. ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಲು 10 ಚೆಕ್‌ಪೋಸ್ಟ್ ತೆರೆಯಲಾಗಿದೆ.
ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದಿಂದ ಈ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮಾರ್ಗಸೂಚಿಯನ್ವಯ ಲಸಿಕಾ ಸ್ಥಿತಿ, ನೆಗೆಟಿವ್ ಆರ್‌ಟಿಪಿಸಿಆರ್ ವರದಿ ತಪಾಸಣೆ ಮಾಡಲಾಗುವುದು. ಅಗತ್ಯವಿದ್ದಲ್ಲಿ ಆರ್‌ಎಟಿ/ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ, ಸಾಲೆತ್ತೂರು, ಕನ್ಯಾನ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ಮೇನಾಲ, ಸ್ವರ್ಗ, ಸುಳ್ಯ ಪದವು, ಸುಳ್ಯ ವ್ಯಾಪ್ತಿಯ ಮೂರೂರು, ಮಂಡೆಕೋಲು, ಬಡ್ಡಡ್ಕ, ಕನ್ನಡಿತೋಡುವಿನಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಎಸ್ಪಿ ವ್ಯಾಪ್ತಿಯಲ್ಲಿ ಈ ಮೊದಲೇ ನಾಲ್ಕು ಚೆಕ್‌ಪೋಸ್ಟ್‌ಗಳು ಕಾರ್ಯಾಚರಿಸುತ್ತಿದ್ದವು. ಮಂಗಳವಾರದಿಂದ ಹೆಚ್ಚುವರಿಯಾಗಿ ಆರು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಎಸ್ಪಿ ಪ್ರಕಟನೆ ತಿಳಿಸಿದೆ.

Next Story





