ಶಿವಮೊಗ್ಗ: ಮಹಿಳೆ ಕೊಲೆ ಪ್ರಕರಣ; ಆರೋಪಿಯ ಬಂಧನ

ಶಿವಮೊಗ್ಗ, ಜು.13: ನಗರದ ಎನ್.ಟಿ.ರಸ್ತೆಯ ಬಸ್ ತಂಗುದಾಣದಲ್ಲಿ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಹೊಸಹಳ್ಳಿ ಗ್ರಾಮದ ಲತಾಬಾಯಿ (40) ಎಂಬಾಕೆಯ ಕೊಲೆ ಪ್ರಕರಣದ ಆರೋಪಿ ಬಳ್ಳಾರಿಯ ಕೊಮಾರನಹಳ್ಳಿ ತಾಂಡ ನಿವಾಸಿ ದೇವೇಂದ್ರನಾಯ್ಕ ಅಲಿಯಾಸ್ ದೇವೇಂದ್ರ (27) ಎಂಬಾತನನ್ನು ಬಂಧಿಸಲಾಗಿದೆ.
10 ತಿಂಗಳಿನಿಂದ ಲತಾಬಾಯಿ ಮತ್ತು ದೇವೇಂದ್ರ ಅವರ ನಡುವೆ ಒಡನಾಟವಿತ್ತು. ಜು.1ರ ರಾತ್ರಿ ಕ್ಷುಲ್ಲಕ ವಿಚಾರಕ್ಕಾಗಿ ಗಲಾಟೆಯಾಗಿದೆ. ಜು.2ರ ಬೆಳಗಿನ ಜಾವ ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಎನ್.ಟಿ.ರಸ್ತೆಯ ಗಾಜನೂರು ಬಸ್ ನಿಲ್ದಾಣದಲ್ಲಿ ಮಲಗಿದ್ದ ಲತಾಬಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಐಪಿಸಿ ಕಲಂ 302 ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ದೊಡ್ಡಪೇಟೆ ಪಿಐ ಹರೀಶ್ ಪಟೇಲ್, ಪಿಎಸ್‌ಐ ಹಾಗೂ ಸಿಬ್ಬಂದಿಯ ತಂಡ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





