ನಿರ್ಮಾಪಕ ಉಮಾಪತಿ ನನಗೆ ಪರಿಚಯ: ಅರುಣಾಕುಮಾರಿ
ಬೆಂಗಳೂರು, ಜು.13: ಸಿನೆಮಾ ನಿರ್ಮಾಪಕ ಉಮಾಪತಿ ನನಗೆ ಪರಿಚಯ ಇದ್ದಾರೆ ಎಂದು ಅರುಣಾಕುಮಾರಿ ತಿಳಿಸಿದ್ದಾರೆ.
ನಟ ದರ್ಶನ್ ಅವರಿಗೆ ವಂಚನೆಗೆ ಯತ್ನದ ಆರೋಪದ ಹೊತ್ತಿರುವ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ಅಲ್ಲದೆ, ಅವರು ನನಗೆ ಮಾ.30 ರಿಂದಲೂ ಪರಿಚಯ ಇದ್ದಾರೆ ನುಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಉಮಾಪತಿ ಅವರೊಂದಿಗೆ ಚರ್ಚಿಸಿರುವ ಮತ್ತು ಸಂದೇಶಗಳ ಕುರಿತು ದೊಡ್ಡ ಸುದ್ದಿಯಾಗುತ್ತಿದೆ. ಆದರೆ, ನಾನು ಸಾಲ ಕೊಡಿಸುವುದಕ್ಕೆ ಭೇಟಿ ಮಾಡಿರುವುದು ನಿಜ. ಬದಲಾಗಿ, ನಾನು ಯಾವುದೇ ಕಳ್ಳತನ ಮಾಡಿಲ್ಲ ಎಂದು ತಿಳಿಸಿದರು.
Next Story





