ರಾಜ್ಯಸಭೆಯಲ್ಲಿ ಸದನ ನಾಯಕರಾಗಿ ಪಿಯೂಷ್ ಗೋಯಲ್ ಆಯ್ಕೆ

ಹೊಸದಿಲ್ಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿದ್ದಾರೆ. ಕಳೆದ ವಾರ ಕರ್ನಾಟಕದ ಹೊಸ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ತೆರವಾದ ಸ್ಥಾನವನ್ನು ಗೋಯಲ್ ತುಂಬಲಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಕೆಲವೇ ದಿನಗಳ ಮೊದಲು ರಾಜ್ಯಸಭೆಯ ಉಪನಾಯಕನಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷದ ಗೋಯಲ್ ಅವರನ್ನು ಪ್ರಮುಖ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬಿಜೆಪಿ ನಾಯಕ 2010 ರಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.
ಕಳೆದ ವಾರ ನಡೆದ ಸಂಫುಟ ಪುನರ್ರಚನೆಯ ವೇಳೆ ಗೋಯಲ್ ಅವರು ಜವಳಿ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು, ಇದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಹಿಸಿದ್ದರು. ಅವರು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದ ಮುಖ್ಯಸ್ಥರಾಗಿ ಮುಂದುವರಿದ್ದಾರೆ. ಒಡಿಶಾದ ರಾಜ್ಯಸಭಾ ಸಂಸದ ಅಶ್ವಿನಿ ವೈಷ್ಣವ್ ಅವರನ್ನು ದೇಶದ ಹೊಸ ರೈಲ್ವೆ ಸಚಿವರಾಗಿ ಆಯ್ಕೆ ಮಾಡಲಾಯಿತು. ರೈಲ್ವೆ ಖಾತೆಯನ್ನು ಈ ಹಿಂದೆ ಗೋಯಲ್ ನಿಭಾಯಿಸುತ್ತಿದ್ದರು.
Next Story





