ಕೇಂದ್ರ ಸರಕಾರದ ಉದ್ಯೋಗಿಗಳ ತುಟ್ಟಿಭತ್ತೆಯಲ್ಲಿ ಶೇ.11ರಷ್ಟು ಏರಿಕೆ

ಹೊಸದಿಲ್ಲಿ,ಜು.14: ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ತೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್)ವನ್ನು ಶೇ.17ರಿಂದ ಶೇ.28ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರವು ಬುಧವಾರ ಒಪ್ಪಿಗೆ ನೀಡಿದೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರವು ಕಳೆದ ವರ್ಷ ಡಿಎ ಮತ್ತು ಡಿಆರ್ ಏರಿಕೆಯನ್ನು ತಡೆಹಿಡಿದಿತ್ತು.
ಈ ಬೆಳವಣಿಗೆಯು ಇಂತಹ ಪ್ರಕಟಣೆಗಾಗಿ ತಿಂಗಳುಗಳಿಂದಲೂ ಕಾಯುತ್ತಿದ್ದ ಕೇಂದ್ರ ಸರಕಾರದ ನೌಕರರಿಗೆ ಮತ್ತು ಪಿಂಚಣಿದಾರರಲ್ಲಿ ನೆಮ್ಮದಿಯನ್ನು ಮೂಡಿಸಿದೆ.
ಡಿಎ ಮತ್ತು ಡಿಆರ್ ಏರಿಕೆಯ ಲಾಭಗಳು ಜುಲೈ 1ರಿಂದಲೇ ಅನ್ವಯವಾಗಲಿವೆ. ಈ ಕ್ರಮವು ಸರಕಾರದ ಬೊಕ್ಕಸಕ್ಕೆ ಸುಮಾರು 34,400 ಕೋ.ರೂ.ಗಳ ಹೊರೆಯನ್ನುಂಟು ಮಾಡುವ ನಿರೀಕ್ಷೆಯಿದೆ.
ಏರಿಕೆಗೆ ಮುನ್ನ ಕಳೆದ ವರ್ಷದ ಎರಡು ಮತ್ತು ಈ ವರ್ಷದ ಒಂದು ಸೇರಿದಂತೆ ಕನಿಷ್ಠ ಮೂರು ಡಿಎ ಕಂತುಗಳು ನೌಕರರಿಗೆ ಬಾಕಿಯಾಗಿವೆ. ಈ ಕಂತುಗಳ ಭಾಗವಾಗಿ ಶೇ.11ರಷ್ಟು ಡಿಎ ಏರಿಕೆಗೆ ಸರಕಾರವು ಒಪ್ಪಿಗೆ ನೀಡಿದೆ.
Next Story





