ಒಡಿಶಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ವಸೀಂ ಜಾಫರ್ ನೇಮಕ

Image Source : IPLT20.COM
ಕಟಕ್: ಮುಂಬರುವ ದೇಶೀಯ ಋತುವಿನಲ್ಲಿ ಮಾಜಿ ಟೆಸ್ಟ್ ಓಪನರ್ ಹಾಗೂ ದೇಶೀಯ ಕ್ರಿಕೆಟ್ ದಿಗ್ಗಜ ವಸೀಂ ಜಾಫರ್ ಅವರು ಬುಧವಾರ ಒಡಿಶಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
“ಅವರು (ಜಾಫರ್) ಮುಖ್ಯ ಕೋಚ್ ಆಗಿರುತ್ತಾರೆ. ಅವರಿಗೆ ಎರಡು ವರ್ಷಗಳ ಗುತ್ತಿಗೆ ನೀಡಲಾಗಿದೆ ”ಎಂದು ಒಡಿಶಾ ಕ್ರಿಕೆಟ್ ಅಸೋಸಿಯೇಶನ್ (ಒಸಿಎ) ಸಿಇಒ ಸುಬ್ರತಾ ಬೆಹೆರಾ ಪಿಟಿಐಗೆ ತಿಳಿಸಿದ್ದಾರೆ.
ಎರಡು ವರ್ಷ ಕೋಚ್ ಆಗಿದ್ದ ಮಾಜಿ ರಾಜ್ಯ ನಾಯಕ ರಶ್ಮಿ ರಂಜನ್ ಪರಿದಾ ಅವರಿಂದ ತೆರವಾದ ಸ್ಥಾನಕ್ಕೆ ಜಾಫರ್ ನೇಮಕ ಮಾಡುವ ಕುರಿತಂತೆ ಒಸಿಎ ಕ್ರಿಕೆಟ್ ಸಲಹಾ ಸಮಿತಿಯ ಸಭೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಾಫರ್ ಎರಡನೇ ಬಾರಿ ರಾಜ್ಯ ತಂಡವೊಂದರ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಮಾರ್ಚ್ 2020 ರಲ್ಲಿ ನಿವೃತ್ತಿಯಾದ ನಂತರ, ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ ಗಳಿಸಿರುವ ಜಾಫರ್ ಉತ್ತರಾಖಂಡ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದರು. ಆದರೆ ನಂತರ ಅವರು ಅಸೋಸಿಯೇಶನ್ನೊಂದಿಗಿನ ಭಿನ್ನಮತದಿಂದಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಭಾರತ ಪರ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನು ಆಡಿರುವ ಜಾಫರ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ನ ಬ್ಯಾಟಿಂಗ್ ತರಬೇತುದಾರರಾಗಿದ್ದಾರೆ.