ವರದಕ್ಷಿಣೆ, ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಕೇರಳ ರಾಜ್ಯಪಾಲರಿಂದ ನಿರಶನ

ತಿರುವನಂತಪುರ,ಜು.14: ವರದಕ್ಷಿಣೆಯ ಅನಿಷ್ಟ ಪದ್ಧತಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಅರಿವನ್ನು ಮೂಡಿಸಲು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಬುಧವಾರ ಒಂದು ದಿನದ ನಿರಶನವನ್ನು ಆಚರಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ನಿರಶನವು ಸಂಜೆ ಆರು ಗಂಟೆಗೆ ಅಂತ್ಯಗೊಂಡಿತು ಎಂದು ರಾಜಭವನದ ಮೂಲಗಳು ತಿಳಿಸಿದವು.
ಇಂತಹ ಸಾಮಾಜಿಕ ಕಾರಣವನ್ನಿಟ್ಟುಕೊಂಡು ರಾಜ್ಯಪಾಲರೊಬ್ಬರ ನಿರಶನವನ್ನು ನಡೆಸಿರುವುದು ಪ್ರಾಯಶಃ ಕೇರಳದ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.
ವರದಕ್ಷಿಣೆಯ ಅನಿಷ್ಟ ಪದ್ಧತಿಯ ಬಗ್ಗೆ ಅರಿವನ್ನು ಮೂಡಿಸಲು ಗಾಂಧಿ ಸ್ಮಾರಕ ನಿಧಿಯಂತಹ ವಿವಿಧ ಗಾಂಧಿವಾದಿ ಸಂಘಟನೆಗಳು ಉಪವಾಸ ಪ್ರತಿಭಟನೆ ಅಭಿಯಾನವನ್ನು ಹಮ್ಮಿಕೊಂಡಿದ್ದು,ಗಾಂಧಿ ಭವನದಲ್ಲಿ ಹಲವಾರು ಗಾಂಧಿವಾದಿಗಳು ಒಂದು ದಿನದ ಉಪವಾಸ ಪ್ರತಿಭಟನೆಯನ್ನು ನಡೆಸಿದರು.
Next Story





