ಎಲ್ಲ ಭಯೋತ್ಪಾದಕ ಶಕ್ತಿಗಳ ಸಂಬಂಧ ಕಡಿದುಕೊಳ್ಳಿ: ತಾಲಿಬಾನ್ ಗೆ ಚೀನಾ ಸೂಚನೆ
ಬೀಜಿಂಗ್, ಜು. 14: ಎಲ್ಲ ಭಯೋತ್ಪಾದಕ ಶಕ್ತಿಗಳ, ಅದರಲ್ಲೂ ಮುಖ್ಯವಾಗಿ ಅಲ್ ಖಾಯಿದ ಬೆಂಬಲಿತ ಉಯಿಘರ್ ಮುಸ್ಲಿಮ್ ತೀವ್ರವಾದಿ ಗುಂಪು ಇಟಿಐಎಮ್ ನೊಂದಿಗಿನ ಸಂಬಂಧಗಳನ್ನಿ ಕಡಿದುಕೊಳ್ಳುವಂತೆ ಚೀನಾವು ತಾಲಿಬಾನ್ ಗೆ ಸೂಚಿಸಿದೆ. ಇಟಿಐಎಮ್ ಗುಂಪು ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ.
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುತ್ತಿರುವಂತೆಯೇ ಚೀನಾ ಈ ಹೇಳಿಕೆ ನೀಡಿದೆ. ದುಶಾಂಬೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶ ಸಚಿವ ವಾಂಗ್ ಯಿ, ಅಫ್ಘಾನಿಸ್ತಾನದಲ್ಲಿ ಯುದ್ಧ, ಅದರಲ್ಲೂ ಮುಖ್ಯವಾಗಿ ಆಂತರಿಕ ಯುದ್ಧವು ಇನ್ನಷ್ಟು ಹರಡುವುದನ್ನು ತಡೆಯಬೇಕು ಎಂದು ಹೇಳಿದರು. ಅದೇ ವೇಳೆ, ರಾಜಕೀಯ ಹೊಂದಾಣಿಕೆಯನ್ನು ಸಾಧಿಸುವುದಕ್ಕಾಗಿ ಹಾಗೂ ದೇಶದಲ್ಲಿ ಎಲ್ಲ ರೀತಿಯ ಭಯೋತ್ಪಾದಕ ಶಕ್ತಿಗಳು ನೆಲೆ ಭದ್ರಪಡಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಅಫ್ಘಾನಿಸ್ತಾನದ ಆಂತರಿಕ ಮಾತುಕತೆಗಳು ಪುನರಾರಂಭಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
Next Story





