ಪಾಕ್ ಗಡಿಯಲ್ಲಿರುವ ಗಡಿದಾಟು ವಶ: ತಾಲಿಬಾನ್
ಕಾಬೂಲ್ (ಅಫ್ಘಾನಿಸ್ತಾನ), ಜು. 14: ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿರುವ ಸ್ಪಿನ್ ಬೋಲ್ದಕ್ ಗಡಿದಾಟನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿದೆ. ವಿದೇಶಿ ಪಡೆಗಳು ಅಫ್ಘಾನಿಸ್ತಾನದಿಂದ ವಾಪಸಾಗುತ್ತಿರುವಂತೆಯೇ, ದೇಶದ ಒಂದೊಂದೇ ಸ್ಥಳಗಳನ್ನು ತಾಲಿಬಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ.
ಆದರೆ, ತಾಲಿಬಾನ್ನ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಹಾಗೂ ಗಡಿದಾಟುವಿನ ಮೇಲೆ ಸರಕಾರಿ ಪಡೆಗಳು ನಿಯಂತ್ರಣ ಹೊಂದಿವೆ ಎಂಬುದಾಗಿ ಅಫ್ಘಾನ್ ಆಂತರಿಕ ಸಚಿವಾಲಯ ಬುಧವಾರ ಹೇಳಿದೆ.
ಅದೇ ವೇಳೆ, ಅಫ್ಘಾನಿಸ್ತಾನದೊಂದಿಗಿನ ಗಡಿಯಲ್ಲಿರುವ ಚಮನ್-ಸ್ಪಿನ್ ಬೋಲ್ದಕ್ ಗಡಿದಾಟಿನ ತಮ್ಮ ಭಾಗದ ಗಡಿಯನ್ನು ಮುಚ್ಚಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ಅಲ್-ಜಝೀರಕ್ಕೆ ತಿಳಿಸಿದ್ದಾರೆ. ‘‘ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಚಮನ್ನಲ್ಲಿ ತಾಲಿಬಾನ್ ಉಪಸ್ಥಿತಿಯನ್ನು ಕಾಣಬಹುದಾಗಿದೆ. ಗಡಿಯ ಅಫ್ಘಾನ್ ಬದಿಯಲ್ಲಿ ಅಫ್ಘಾನಿಸ್ತಾನದ ಸರಕಾರಿ ಪಡೆಗಳು ಕಾಣುತ್ತಿಲ್ಲ’’ ಎಂದು ಸ್ಥಳೀಯ ಆಡಳಿತದ ಅಧಿಕಾರಿ ಆರಿಫ್ ಕಾಕರ್ ಹೇಳಿದರು.
Next Story





