ಬೆಂಗಳೂರು: ಪೊಲೀಸರಿಂದ ಕಾರ್ಯಾಚರಣೆ; ಕಾರು, ಪಿಸ್ತೂಲ್ ಜಪ್ತಿ, 17 ಜನರ ಬಂಧನ

ಬೆಂಗಳೂರು, ಜು.14: ಅಪರಾಧ ಕೃತ್ಯಗಳ ಪತ್ತೆಯಲ್ಲಿ ಭರ್ಜರಿ ಕಾರ್ಯಾಚರಣೆ ಕೈಗೊಂಡಿರುವ ಪೂರ್ವ ವಿಭಾಗದ ಪೊಲೀಸರು 17 ಮಂದಿ ಆರೋಪಿಗಳನ್ನು ಬಂಧಿಸಿ 3 ಕಂಟ್ರಿಮೇಡ್ ಪಿಸ್ತೂಲ್, 24 ಜೀವಂತ ಗುಂಡುಗಳು ಹಾಗೂ 2 ಕೋಟಿ 25 ಲಕ್ಷ ಮೌಲ್ಯದ ಕಾರುಗಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿ ಪೊಲೀಸರು ಕುಖ್ಯಾತ ರೌಡಿಗಳಾದ ಫೈಯಾಜ್‍ವುಲ್ಲಾ, ಸೈಯದ್ ಸಿರಾಜ್ ಅಹ್ಮದ್ ಹಾಗೂ ಮೊಹಮದ್ ಅಲಿಯನ್ನು ಬಂಧಿಸಿ 3 ಕಂಟ್ರಿಮೇಡ್ ಪಿಸ್ತೂಲ್, 24 ಜೀವಂತ ಗುಂಡುಗಳು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗೋವಿಂದಪುರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಶಬ್ಬೀರ್ ಖಾನ್ ಎಂಬ ಆರೋಪಿಯನ್ನು ಬಂಧಿಸಿ 1 ಕೋಟಿ ಮೌಲ್ಯದ ವಿವಿಧ ಮಾದರಿಯ 20 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪುಲಿಕೇಶಿ ನಗರ ಪೊಲೀಸರು ಏಳೂವರೆ ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರೆ, ಹಲಸೂರು ಪೊಲೀಸರು ಇಬ್ಬರನ್ನು ಬಂಧಿಸಿ 9ಲಕ್ಷ ಮೌಲ್ಯದ 11 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ. ಶರಣಪ್ಪ ಹಾಜರಿದ್ದರು.




.jpg)
.jpg)

