ದೈವಸ್ಥಾನ, ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂ. ನಷ್ಟ

ಬ್ರಹ್ಮಾವರ, ಜು.14: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಬುಧವಾರ ಮಟಪಾಡಿ ಗ್ರಾಮದ ಚಿತ್ತಾರಿ ನಂದಿಕೇಶ್ವರ ದೇವಸ್ಥಾನದ ಸಮೀಪದ ದೈವಸ್ಥಾನ ಮತ್ತು ಮನೆಯ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಸುಮಾರು 150ವರ್ಷ ಹಳೆಯ ಗೋಳಿಮರ ದೇವಸ್ಥಾನದ ಸಮೀಪದ ದೈವಸ್ಥಾನದ ಮೇಲೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ದೈವಸ್ಥಾನದ ಮೇಲ್ಛಾವಣಿಗೆ ಹಾನಿಯಾಗಿದೆ. ಅಲ್ಲದೆ ಅಲ್ಲಿಯೇ ಸಮೀಪದ ಮಹಾಬಲ ನಾಯರಿ ಎಂಬವರ ಮನೆಯ ಮೇಲೂ ಮರದ ಕೊಂಬೆ ಬಿದ್ದು ಮನೆಯ ಛಾವಣಿ ಮತ್ತು ಬಚಲು ಕೋಣೆಗೆ ಹಾನಿಯಾಗಿದೆ. ಇದರಿಂದ ಒಟ್ಟು 6 ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಅದೇ ರೀತಿ ಗಾಳಿಮಳೆಗೆ ಮುದ್ದು ಜತ್ತನ್ ಎಂಬವರ ಹಲಸಿನ ಮರ ಉರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Next Story





