ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಕುಂದಾಪುರ, ಜು.18: ಕಟ್ ಬೇಲ್ತೂರು ಗ್ರಾಮದ ಹರೆಗೋಡು ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹರೆಗೋಡು ನಿವಾಸಿ ಆದರ್ಶ ಎಂಬವರು ಜು.12ರಂದು ಕೆಲಸದ ನಿಮಿತ್ತ ಕಾರ್ಕಳಕ್ಕೆ ಹೋಗಿದ್ದು ಜು.13ರಂದು ರಾತ್ರಿ ವಾಪಾಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಎದುರಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಲಾಕರ್ನಲ್ಲಿ ಇರಿಸಿದ್ದ ಜುಮಕಿ ಬೆಂಡೋಲೆ ಸೆಟ್, ಮುತ್ತಿನ ಬೆಂಡೋಲೆ ಸೆಟ್, ತೆಂಡೂಲ್ಕರ್ ಚೈನ್, ಡಿಸ್ಕೋ ಚೈನ್, ಬ್ರಾಸ್ ಲೈಟ್, 2 ಉಂಗುರ, ವಾಚ್ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 4,66,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





