ಉಡುಪಿ: ಮಳೆಯಿಂದ ಮರಬಿದ್ದ ಮನೆ ಸಂಪೂರ್ಣ ಹಾನಿ
ಉಡುಪಿ, ಜು.14: ತಾಲೂಕಿನ ಶಿವಳ್ಳಿ ಗ್ರಾಮದ ನರಸಿಂಹ ಶೆಟ್ಟಿ ಎಂಬವರ ವಾಸ್ತವ್ಯದ ಪಕ್ಕಾ ಮನೆ ಮೇಲೆ ಮರಬಿದ್ದ ಮನೆ ಸಂಪೂರ್ಣ ಹಾನಿ ಗೊಂಡಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ.
ಅದೇ ರೀತಿ ಬೈಂದೂರು ತಾಲೂಕು ಶಿರೂರಿನ ಅಲಿ ಅಬೂಬಕ್ಕರ್ ಇವರ ಹಾಗೂ ಬ್ರಹ್ಮಾವರ ತಾಲೂಕು ಕಾರ್ಕಡ ಗ್ರಾಮದ ರಾಜು ಪೂಜಾರಿ ಎಂಬವರ ಮನೆ ಮೇಲೆ ಮರಬಿದ್ದು ತಲಾ 50,000ರೂ.ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ನಿನ್ನೆ ಮನೆ ಹಾನಿಯ 11 ಪ್ರಕರಣಗಳು ವರದಿಯಾಗಿದ್ದು ಒಟ್ಟು ನಾಲ್ಕೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕಿನ ಗುಲ್ವಾಡಿ, ಕೆದೂರು, ಉಳ್ಳೂರು, ತಲ್ಲೂರು, ಕಾರ್ಕಳ ತಾಲೂಕಿನ ನಿಟ್ಟೆ, ಬ್ರಹ್ಮಾವರ ತಾಲೂಕಿನ ಹೊಸಾಳ, ಉಡುಪಿ ತಾಲೂಕಿನ ಉದ್ಯಾವರ ಹಾಗೂ ಮೂಡನಿಡಂಬೂರು ಗ್ರಾಮಗಳಿಂದ ವಿವಿಧ ಪ್ರಕರಣಗಳು ವರದಿಯಾಗಿವೆ.
Next Story





