ಮೋಹನ್ ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು, ಜು.14: ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ ಇವುಗಳ ಜಂಟಿ ಆಶ್ರಯದಲ್ಲಿ ಮೊದಲ ಬಾರಿಗೆ ನೀಡುವ ಅತ್ಯುತ್ತಮ ವೆಬ್‌ಸೈಟ್ (ಅಂತರ್ಜಾಲ) ವರದಿಗೆ ರಾಜ್ಯ ಮಟ್ಟದ ಬಿ.ಜಿ. ಮೋಹನ್‌ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನೊಳಗೊಂಡಿದೆ. ಪ್ರಶಸ್ತಿಗೆ ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಜೂ.30ರೊಳಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್‌ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳಲ್ಲಿ ಓರ್ವರನ್ನು ಆಯ್ಕೆ ಮಾಡಲಾಗುವುದು.
ಒಬ್ಬ ಪತ್ರಕರ್ತರಿಗೆ ಒಂದು ವರದಿ ಕಳುಹಿಸಲು ಮಾತ್ರ ಅವಕಾಶವಿದೆ. ವರದಿಯು ಬೇರೆ ಯಾವುದೇ ಪತ್ರಿಕೆ ಅಥವಾ ಸುದ್ದಿಜಾಲದಲ್ಲಿ ಪ್ರಕಟವಾಗಿರಬಾರದು.ಆಯ್ಕೆಗೆ ವರದಿಯ ಮುದ್ರಿತ ಮೂರು ಪ್ರತಿಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಜು.31ರೊಳಗೆ ಕಳುಹಿಸಿಕೊಡಬೇಕು. ಮುದ್ರಿತ ವರದಿಯ ವೆಬ್‌ಸೈಟ್ ಲಿಂಕ್‌ನ್ನು ಕಡ್ಡಾಯವಾಗಿ 9844619763 ನಂಬರಿಗೆ ವಾಟ್ಸ್‌ಆ್ಯಪ್ ಮಾಡಬೇಕು. ವರದಿಯನ್ನು ದಿನೇಶ್ ಎನ್. ತುಂಬೆ, ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ, ಪ್ರಗತಿ ಪ್ರಿಂಟರ್ಸ್, ತುಂಬೆ - 574 143, ಬಂಟ್ವಾಳ ತಾಲೂಕು, ದ.ಕ.ಗೆ ಕಳುಹಿಸಲು ಪ್ರಕಟನೆ ತಿಳಿಸಿದೆ.







