ಕಸ ಗುಡಿಸುತ್ತಿದ್ದ ಆಶಾ ಕಂದಾರ ರಾಜಸ್ಥಾನ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣ

photo: Times Now
ಜೈಪುರ: ರಾಜಸ್ಥಾನದ ಜೋಧ್ಪುರದ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದ ಆಶಾ ಕಂದಾರ ಎಂಬ ಮಹಿಳೆ ಇತ್ತೀಚೆಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶೀಘ್ರದಲ್ಲೇ ಅವರಿಗೆ ಜಿಲ್ಲಾಧಿಕಾರಿ ಹುದ್ದೆ ನೀಡಲಾಗುವುದು.
ಎರಡು ವರ್ಷಗಳ ಹಿಂದೆ ಪರೀಕ್ಷೆಯನ್ನು ಬರೆದಿದ್ದ ಆಶಾ, ಕೋವಿಡ್-19 ನಿಂದ ಉಂಟಾದ ವಿಳಂಬದಿಂದಾಗಿ ತನ್ನ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ತನ್ನ ಕುಟುಂಬವನ್ನು ಸಲಹಲು ಆಶಾ ಕಸ ಗುಡಿಸುವ ಕೆಲಸ ಕೈಗೆತ್ತಿಕೊಂಡರು. ಎರಡು ಮಕ್ಕಳ ತಾಯಿಯಾದ ಆಶಾ ಎಂಟು ವರ್ಷಗಳ ಹಿಂದೆ ತನ್ನ ಗಂಡನಿಂದ ಬೇರ್ಪಟ್ಟಿದ್ದರು.
ಸಮಾಜದಲ್ಲಿ ತಾನು ಎದುರಿಸಿದ ತಾರತಮ್ಯವು ಅಂತಿಮವಾಗಿ ತನ್ನ ಜೀವನವನ್ನು ಬದಲಿಸಲು ಪ್ರೇರಣೆಯಾಯಿತು. ತಾನು ಐಎಎಸ್ ಅಧಿಕಾರಿಯಾಗಲು ಬಯಸಿದ್ದೆ. ಆದರೆ ವಯಸ್ಸಿಗೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಆಶಾ ಹೇಳಿದ್ದಾರೆ.
Next Story





