ಜಾನಪದ ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಆಹ್ವಾನ
ಬೆಂಗಳೂರು, ಜು.15: ಕರ್ನಾಟಕ ಜಾನಪದ ಪರಿಷತ್ ಜಾನಪದ ಲೋಕದಲ್ಲಿ 2021-22ರ ಶೈಕ್ಷಣಿಕ ಸಾಲಿಗೆ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಜಾನಪದ ಡಿಪ್ಲೋಮಾ ಕೋರ್ಸ್‍ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿ ರವಿವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿವೆ. ಜನಪದ ವಿದ್ವಾಂಸರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾರ್ಗದರ್ಶನದಲ್ಲಿ ತರಗತಿಗಳು ನಡೆಯಲಿವೆ. ಆಸಕ್ತರು 15ದಿನಗಳ ಒಳಗಾಗಿ ಜಾನಪದ ಲೋಕ, ಬೆಂಗಳೂರು-ಮೈಸೂರು ಹೆದ್ದಾರಿ, ಐಜೂರು ಅಂಚೆ, ರಾಮನಗರ ಜಿಲ್ಲೆಗೆ ಹಾಗೂ ದೂ.7975661363 ಅಥವಾ ಜಾನಪದ ಪರಿಷತ್, ಜಾನಪದ ಸಿರಿಭವನ, ನಂ.1, ಜಲದರ್ಶಿನಿ ಬಡಾವಣೆ, ನ್ಯೂ ಬಿಇಎಲ್ ರಸ್ತೆ ಬೆಂ.54ಕ್ಕೆ ಮಾಹಿತಿಯೊಂದಿಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





