ಕೋವಿಡ್ ಲಸಿಕೆಯ 1.92 ಕೋಟಿ ಡೋಸ್ಗಳು ರಾಜ್ಯ, ಕೇಂದ್ರಾಡಳಿತ ಪ್ರದೇಶ, ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯ: ಕೇಂದ್ರ ಸರಕಾರ
ಹೊಸದಿಲ್ಲಿ, ಜು. 15: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದುರೆಗೆ ಕೋವಿಡ್ ಲಸಿಕೆಯ 40.31 ಕೋಟಿಗೂ ಅಧಿಕ ಡೋಸ್‌ಗಳನ್ನು ಪೂರೈಸಲಾಗಿದೆ. ಬಳಕೆಯಾಗದ 1.92 ಕೋಟಿಗೂ ಅಧಿಕ ಡೋಸ್‌ಗಳು ಈಗಲೂ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ‘‘ಎಲ್ಲಾ ರೀತಿಯಲ್ಲಿ ಇದುವರೆಗೆ ಲಸಿಕೆಯ 40.31 ಕೋಟಿ (40,31,74,380)ಗೂ ಅಧಿಕ ಡೋಸ್‌ಗಳನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ. ಅಲ್ಲದೆ, ಮುಂದಿನ 83,85,790 ಡೋಸ್‌ಗಳು ಪೂರೈಕೆಯ ಹಾದಿಯಲ್ಲಿದೆ’’ ಎಂದು ಆರೋಗ್ಯ ಸಚಿವಾಲಯ ಹೇಳಿಕೆ ತಿಳಿಸಿದೆ. ಇದರಲ್ಲಿ ವ್ಯರ್ಥ್ಯ ಸೇರಿದಂತೆ ಒಟ್ಟು 38,39,02,614 ಡೋಸ್‌ಗಳು (ಗುರುವಾರ ಲಭ್ಯವಾದ ದತ್ತಾಂಶದ ಪ್ರಕಾರ) ಉಪಯೋಗವಾಗಿವೆ ಎಂದು ಸಚಿವಾಲಯ ತಿಳಿಸಿದೆ. ಲಸಿಕೆಯ 1.92 ಕೋಟಿ (1,92,71,766)ಗೂ ಅಧಿಕ ಬಾಕಿ ಇರುವ ಅಥವಾ ಬಳಕೆಯಾಗದ ಡೋಸ್‌ಗಳು ಈಗಲೂ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಾಕಿ ಇವೆ ಎಂದು ಹೇಳಿಕೆ ತಿಳಿಸಿದೆ.
ಸಾರ್ವತ್ರಿಕ ಕೋವಿಡ್ ಲಸಿಕೀಕರಣ ಕಾರ್ಯಕ್ರಮ ಜೂನ್ 21ರಂದು ಆರಂಭಗೊಂಡಿತ್ತು. ಕೋವಿಡ್ ಲಸಿಕೆಯ ಸಾರ್ವತ್ರೀಕರಣದ ನೂತನ ಹಂತದಲ್ಲಿ ಕೇಂದ್ರ ಸರಕಾರ ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಗಳಲ್ಲಿ ಶೇ. 75ನ್ನು ಖರೀದಿಸಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸಲಿದೆ.





