ಶಿವಮೊಗ್ಗ: ಲಂಬಾಣಿ ಜನರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ; ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಜು.15: ಲಂಬಾಣಿ ಸಮುದಾಯದ ಜನರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿಕಾರಿಪುರ ತಾಲೂಕಿನ ಬೇಗೂರು ತಾಂಡದಲ್ಲಿ ನಡೆದ ಲಂಬಾಣಿ ಸಮುದಾಯದೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ ಮೂಲಕ ಸಂಸತ್ತಿನಲ್ಲಿ ತಾಂಡಗಳನ್ನು ಕಂದಾಯ ಜಮೀನನ್ನಾಗಿ ಪರಿವರ್ತನೆ ಮಾಡುವ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಲಂಬಾಣಿ ತಾಂಡಾದ ಜನರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಘೋಷಿಸಿದರು.
ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ರಾಜಕಾರಣದ ಬಗ್ಗೆ ಮತ್ತೊಂದು ದಿನ ಮಾತನಾಡುವೆ ಎಂದ ಅವರು, ಲಂಬಾಣಿ ಜನರ ಧ್ವನಿ ಆಗಿ ನಾನು ಇರುತ್ತೇನೆ.ಸಿಎಂ ಬಿಎಸ್ ವೈ ಕ್ಷೇತ್ರದ ಜನರೇ ಅನೇಕ ಸಮಸ್ಯೆ ಹೊರ ಹಾಕಿದ್ದಾರೆ. ಕೊರೊನಾ ಸೇರಿದಂತೆ ಲಂಬಾಣಿ ಸಮಾಜದ ಕಂದಾಯ ಜಮೀನಿನ ಹಕ್ಕು ಪತ್ರ ಸಮಸ್ಯೆಗಳಿವೆ .ಈ ಬಗ್ಗೆ ಗಮನಹರಿಸಲಾಗುವುದು ಎಂದರು.
Next Story





