ಮಂಗಳೂರು: ಮೀನು ಹಿಡಿಯುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿ ಮೀನುಗಾರ ಮೃತ್ಯು
![ಮಂಗಳೂರು: ಮೀನು ಹಿಡಿಯುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿ ಮೀನುಗಾರ ಮೃತ್ಯು ಮಂಗಳೂರು: ಮೀನು ಹಿಡಿಯುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿ ಮೀನುಗಾರ ಮೃತ್ಯು](https://www.varthabharati.in/sites/default/files/images/articles/2021/07/16/299061-1626410066.gif)
ಮಂಗಳೂರು, ಜು.16: ಮೀನುಗಾರರೊಬ್ಬರು ಬಲೆ ಹರಡಿ ಮೀನು ಹಿಡಿಯುತ್ತಿದ್ದ ಸಂದರ್ಭ ಅಕಸ್ಮಾತ್ ನದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಅಳಿವೆಬಾಗಿಲು ನದಿ ಸಮೀಪ ನಡೆದಿರುವುದು ವರದಿಯಾಗಿದೆ.
ತೋಟಬೆಂಗ್ರೆ ನಿವಾಸಿ ಜಯ ಪುತ್ರನ್ (55) ಮೃತ ಮೀನುಗಾರ ಎಂದು ತಿಳಿದುಬಂದಿದೆ.
ಇವರು ಅಳಿವೆಬಾಗಿಲಿನ ಸಮೀಪ ಮೀನು ಹಿಡಿಯುತ್ತಿದ್ದ ವೇಳೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಈ ವೇಳೆ ಆಕಸ್ಮಿಕವಾಗಿ ಮೀನು ಹಿಡಿಯುವ ಬಲೆ ಕಾಲಿಗೆ ಸಿಲುಕಿದ್ದರಿಂದ ಈಜಲಾಗದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತುಂಬಾ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಮನೆಮಂದಿ ಹುಡುಕಾಡಿದಾಗ ಕಸಬ ಬೆಂಗ್ರೆ ಸಮೀಪ ಜಯ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story