ಉಳ್ಳಾಲ ವ್ಯಾಪ್ತಿಯಲ್ಲಿ 2 ಮನೆಗೆ ಹಾನಿ, ಶಾಲಾ ಆವರಣ ಗೋಡೆ ಕುಸಿತ

ಉಳ್ಳಾಲ, ಜು.16: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿಮಳೆಗೆ ಉಳ್ಳಾಲ ಗ್ರಾಮದ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಎರಡು ಮನೆಗಳು ಹಾನಿಯಾದ ಬಗ್ಗೆ ವರದಿಯಾಗಿದೆ.
ಹೊಯಿಗೆ ಎಂಬಲ್ಲಿ ಫೆಲಿಕ್ಸ್ ಡಿಸೋಜ ಎಂಬವರ ವಾಸ್ತವ್ಯದ ಮನೆಯು ಭಾಗಶಃ ಹಾನಿಯಾಗಿದೆ. ಉಳ್ಳಾಲ ಉಳಿಯ ಎಂಬಲ್ಲಿ ಶೈನಿ ಡಿಸೋಜರ ವಾಸ್ತವ್ಯದ ಮನೆ ತೀವ್ರ ಹಾನಿಯಾಗಿದೆ.
ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನಾದಿ ಎಂಬಲ್ಲಿ ಅಬೂಬಕರ್ ಎಂಬವರ ಮನೆ ಗಾಳಿಮಳೆಗೆ ಹಾನಿಯಾಗಿದೆ.
ಮೀನಾದಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿವೆ.
Next Story







