ವಿಸ್ಟಡೋಮ್ ಕೋಚ್ ಸಹಿತ ಕಾರವಾರ ಬೆಂಗಳೂರು ರೈಲು ಆರಂಭಿಸಲು ಸಿಪಿಎಂ ಒತ್ತಾಯ
ಉಡುಪಿ, ಜು.16: ವಾರದಲ್ಲಿ 3 ದಿನ ಚಲಿಸುತ್ತಿದ್ದ ಕಾರವಾರ- ಯಶವಂತಪುರ ರೈಲನ್ನು ಲಾಭದಾಯಕ ಅಲ್ಲ ಎಂಬ ಕಾರಣ ನೀಡಿ ಸುಮಾರು 1 ವರ್ಷದಿಂದ ರದ್ದುಗೊಳಿಸಲಾಗಿದೆ. ಈ ರೈಲನ್ನು ಆರಂಭಿಸಬೇಕು ಹಾಗೂ ವಿಸ್ಟಾಡೋಮ್ ಕೋಚ್ ಅಳವಡಿಸಬೇಕು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಿಸುವ ಮೂಲಕ ಕೋವಿಡ್ ನಂತರದ ಕಾಲಘಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವತ್ತ ಸರಕಾರ ಮತ್ತು ಜನ ಪ್ರತಿನಿಧಿಗಳು ಚಿಂತಿಸಬೇಕು. ರೈಲು ಸಂಚಾರ ಪುನನಾರಂಭ ಮತ್ತು ವಿಸ್ಟಾ ಡೋಮ್ ಕೋಚ್ ಅಳವಡಿಕೆ ಪ್ರವಾಸೋದ್ಯಮ ಹೆಚ್ಚಿಸಲು ಸಹಕಾರವಾಗು ತ್ತದೆ. ಅಲ್ಲದೆ ಆಸ್ಪತ್ರೆ ಮತ್ತು ಕಚೇರಿಗಳಿಗೆ ತೆರಳುವವರಿಗೆ ಸಹಾಯವಾಗುತ್ತದೆ. ಜಿಲ್ಲೆಯ ಹಿತದೃಷ್ಟಿಯಿಂದ ಕಾರವಾರ -ಯಶವಂತಪುರ ರೈಲು ಪುನರಾರಂಭಕ್ಕೆ ಜಿಲ್ಲೆಯ ಸಂಘ ಸಂಸ್ಥೆಗಳು ಮತ್ತು ಜನತೆ ಒತ್ತಾಯಿಸಬೇಕೆಂದು ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Next Story





