ಉಡುಪಿ: ಯಕ್ಷಗಾನ ಕಲಾವಿದರಿಗೆ ಸಹಾಯಧನ ವಿತರಣೆ

ಉಡುಪಿ, ಜು.16: ಕೊರೋನ ಕಾರಣದಿಂದ 2020-21ನೇ ಸಾಲಿನ ತಿರುಗಾಟದಲ್ಲಿ ಭಾಗಶ: ಸಂಭಾವನೆ ಪಡೆದ 20 ಮೇಳಗಳ 409 ಮಂದಿ ಯಕ್ಷಗಾನ ಕಲಾವಿದರಿಗೆ ಹಾಗೂ ಯಕ್ಷ ಶಿಕ್ಷಣ ಗುರುಗಳ ಖಾತೆಗೆ ತಲಾ 2,500ರೂ. ಮೊತ್ತದ ಸಹಾಯಧನ ವಿತರಣೆ ಶುಕ್ರವಾರ ರಥಬೀದಿ ಯಲ್ಲಿರುವ ಉಡುಪಿ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ನಡೆಯಿತು.
ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾದರಿಗೆ ಒಟ್ಟು 10,22,500 ರೂ.ಗಳ ಸಹಾಯಧನವನ್ನು ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಲಾರಂಗ ಸಮಾಜದ ವಿಶ್ವಾಸಾರ್ಹತೆಯನ್ನು ಗಳಿಸಿದ್ದು, ಸಂಸ್ಥೆಯ ಚಟುವಟಿಕೆ ಯೊಂದಿಗೆ ತಾನು ಸಾ ಕೈ ಜೋಡಿಸುವುದಾಗಿ ನುಡಿದರು.
ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾದರಿಗೆ ಒಟ್ಟು 10,22,500 ರೂ.ಗಳ ಸಹಾಯನವನ್ನುಅ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಕಿಟ್ ವಿತರಿಸಿದರು. ಈಸಂದರ್ಭ ಮಾತನಾಡಿದ ಅವರು ಕಲಾರಂಗ ಸಮಾಜದ ವಿಶ್ವಾಸಾರ್ಹತೆಯನ್ನು ಗಳಿಸಿದ್ದು, ಸಂಸ್ಥೆಯ ಚಟುವಟಿಕೆ ಯೊಂದಿಗೆ ತಾನು ಸದಾ ಕೈ ಜೋಡಿಸುವುದಾಗಿ ನುಡಿದರು.
ಸಾಲಿಗ್ರಾಮ ಮೇಳದ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ, ಬಪ್ಪನಾಡು ಮೇಳದ ಭಾಗವತ ಗಣೇಶ್ ಕುಮಾರ್ ಹೆಬ್ರಿ, ಯಕ್ಷಶಿಕ್ಷಣದ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿಯವರಿಗೆ ಸಾಂಕೇತಿಕವಾಗಿ ಹಾಯಧನದ ಚೆಕ್ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಣಂಬೂರು ವಾಸುದೇವ ಐತಾಳ, ಸಿ.ಎ.ಗಣೆಶ್ ಕಾಂಚನ್ ಬಾಗವಹಿಸಿ ಮಾತನಾಡಿದರು.ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದಶಿರ್ ನಾರಾಯಣ ಎಂ.ಹೆಗಡೆ ವಂದಿಸಿದರು.








