17 ಪ್ರಯಾಣಿಕರಿದ್ದ ರಶ್ಯಾದ ವಿಮಾನ ನಾಪತ್ತೆ

photo: twitter/@AOBPAK
ಮಾಸ್ಕೋ, ಜು.16: 17 ಪ್ರಯಾಣಿಕರಿದ್ದ ರಶ್ಯಾದ ಎಎನ್-28 ಪ್ರಯಾಣಿಕರ ವಿಮಾನವೊಂದು ಶುಕ್ರವಾರ ಸೈಬೀರಿಯಾದ ಟಾಮ್ಸ್ಕ್ ಪ್ರದೇಶದಲ್ಲಿ ನಾಪತ್ತೆಯಾಗಿದೆ ಎಂದು ವಿಮಾನಯಾನ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಸೈಬೀರಿಯಾದ ಪ್ರಾದೇಶಿಕ ರಾಜಧಾನಿಯಲ್ಲಿ ಇಳಿಯುವ ಹಂತದಲ್ಲಿ ವಿಮಾನ ರೇಡಾರ್ನಿಂದ ಕಣ್ಮರೆಯಾಗಿದೆ. ವಿಮಾನದ ತುರ್ತು ಸಂಕೇತ ದೀಪ ಇನ್ನೂ ಸಕ್ರಿಯವಾಗಿದ್ದು ಇದನ್ನು ಆಧರಿಸಿ ವಿಮಾನದ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜುಲೈ ಮೊದಲ ವಾರದಲ್ಲಿ ರಶ್ಯಾದ ಎಎನ್-26 ವಿಮಾನ ಪೂರ್ವದ ಕಮ್ಚಟ್ಕ ಪರ್ಯಾಯ ದ್ವೀಪದಲ್ಲಿ ಪತನವಾಗಿ ವಿಮಾನದಲ್ಲಿದ್ದ 28 ಮಂದಿ ಮೃತರಾಗಿದ್ದರು. ಸೋವಿಯತ್ ರಶ್ಯಾ ಯುಗದ ಈ ವಿಮಾನಗಳು ಈ ಹಿಂದಿನ ಸೋವಿಯತ್ ಯೂನಿಯನ್ ದೇಶಗಳಲ್ಲಿ ಇನ್ನೂ ಬಳಕೆಯಲ್ಲಿದ್ದು ಹಲವು ಅಪಘಾತಗಳಲ್ಲಿ ಒಳಗೊಂಡಿವೆ.
Next Story





