ಮಂಗಳೂರು ಈದ್ಗಾ ಮಸೀದಿ, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ : ಯೆನೆಪೋಯ ಅಬ್ದುಲ್ಲಾ ಕುಂಞಿ
ಮಂಗಳೂರು: ಕೋವಿಡ್ ನಿರ್ಬಂಧಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಬಾವುಟಗುಡ್ಡೆ ಈದ್ಗಾ ಮಸೀದಿ ಹಾಗೂ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ಈದ್ ಖುತುಬ ಜು.21ರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ನಿರ್ವಹಿಸಲಾಗುವುದು ಎಂದು ಮಸೀದಿಯ ಅಧ್ಯಕ್ಷರಾದ ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಎರಡೂ ಮಸೀದಿಗಳಲ್ಲಿ ಕೇವಲ ಪರಿಸರದವರಿಗೆ ಮಾತ್ರ ನಮಾಝಿಗೆ ಅವಕಾಶವಿರುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷರಾದ ಕೆ.ಅಶ್ರಫ್, ಎಸ್ ಎಂ ರಶೀದ್ ಹಾಜಿ, ಮುಹಮ್ಮದ್ ಹನೀಫ್ ಹಾಜಿ , ಅದ್ದು ಹಾಜಿ, ಅಬ್ದುಲ್ ಸಮದ್ ಹಾಜಿ, ಐ ಮೊಯ್ದಿನಬ್ಬ ಹಾಜಿ, ಮಕ್ಬೂಲ್ ಹಾಜಿ ಹಾಗೂ ಹಾಜಿ ಯೂಸುಫ್ ಅವರು ಉಪಸ್ಥಿತರಿದ್ದರು.
Next Story





