ಚಾಮರಾಜನಗರ : ಕಬಿನಿ ವಸತಿ ಗೃಹ ಹಿಂಭಾಗದ ಜಮೀನಿನಲ್ಲಿ ವ್ಯಕ್ತಿಯ ಶವ ಪತ್ತೆ

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಗ್ರಾಮದ ಕಬಿನಿ ವಸತಿಗೃಹ ಹಿಂಭಾಗ ಜಮೀನಿನಲ್ಲಿ ಅನುಮಾನಸ್ಪದವಾಗಿ ವ್ಯಕ್ತಿ ಸಾವಪ್ಪಿದರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಮಗೆರೆ ಗ್ರಾಮದ ಮುದ್ದಪ್ಪ ಎಂಬುವವರ ಶವ ಕಬಿನಿ ವಸತಿ ಗೃಹದ ಹಿಂಭಾಗ ಇರುವ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬೆಳದಿದ್ದ ಜೋಳದ ಫಸಲಿನ ನಡುವೆ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಸಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story





