ಮಂಗಳೂರು : ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಗ್ರಾಹಕರ ಸಮ್ಮಿಲನ ಕಾರ್ಯಕ್ರಮ

ಮಂಗಳೂರು : ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ 'ಮೀಟ್ ಆ್ಯಂಡ್ ಗ್ರೀಟ್' ಎಂಬ ವಿಶಿಷ್ಟ ಗ್ರಾಹಕರ ಮಿಲನ ಕಾರ್ಯಕ್ರಮ ಮಂಗಳೂರಿನ ಕರಂಗಳಪಾಡಿ ಬ್ರ್ಯಾಂಚ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾದ ಸೂರ್ಯ ನಾರಾಯಣ್ ರಾವ್, ಇತ್ತೀಚಿನ ದಿನಗಳಲ್ಲಿ ಬದಲಾದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಬಾಂಧವ್ಯ ಸ್ಥಿರವಾಗಿರಲು ಇಂತಹ ಕಾರ್ಯಕ್ರಮಗಳ ಆಯೋಜನೆ ಅನಿವಾರ್ಯವಾಗಿದೆ. ಜನ ಸಾಮಾನ್ಯರಿಗೆ ಹೇಗೆ ಬ್ಯಾಂಕ್ ಮುಖ್ಯವಾಗಿದೆಯೋ ಬ್ಯಾಂಕ್ ಗಳಿಗೂ ಗ್ರಾಹಕರು ಅಷ್ಟೇ ಪ್ರಾಮುಖ್ಯ ವಾಗಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ಸಿಬ್ಬಂದಿ ರೋನಾ ಟಿ. ರಾಯ್, ಪ್ರಜ್ವಲ್, ಅಪರ್ಣ, ಪ್ರವೀಣ್, ಕವಿತಾ, ಅಕ್ಷಯ್ ಗ್ರಾಹಕರಾದ ಟಿ.ಎಸ್. ಅಬೂಬಕರ್, ಶ್ರೀಧರ್ ಶೆಟ್ಟಿ ಪುಲಿಂಚ, ಮನ್ಸೂರ್ ಅಹ್ಮದ್ ಸಾಮಣಿಗೆ, ವಿಕ್ಟರ್ ಮಸ್ಕರೇನಸ್, ಮುಹಮ್ಮದ್ ಸಲೀಂ, ಇಬ್ರಾಹಿಂ ಜವಾದ್ ಹಾಗು ಇತರರು ಉಪಸ್ಥಿತರಿದ್ದರು. ಆಯ್ದ ಗ್ರಾಹಕರಿಗೆ ಇದೇ ಸಂದರ್ಭದಲ್ಲಿ ಸಾಲದ ಪತ್ರಗಳನ್ನು ವಿತರಿಸಲಾಯಿತು.
ಬ್ರ್ಯಾಂಚ್ ವ್ಯವಸ್ಥಾಪಕರಾದ ದಿನೇಶ್ ಕುಮಾರ್ ಸ್ವಾಗತಿಸಿದರು. ಪ್ರಾದೇಶಿಕ ವ್ಯವಸ್ಥಾಪರಾದ ಗಣೇಶ್ ಶೆಣೈ ವಂದಿಸಿದರು.







