ಎ.ಜೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಿ.ಟಿ. ಸ್ಕ್ಯಾನರ್ : ಕರ್ನಾಟಕದಲ್ಲೇ ಮೊದಲ ಘಟಕ ಸ್ಥಾಪನೆ

ಮಂಗಳೂರು, ಜು.16: ನಗರದ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಮಂಗಳೂರಿನಲ್ಲಿ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯ ಒದಗಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿ ಅತ್ಯಾಧುನಿಕ 128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರನ್ನು ಅಳವಡಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.
ಈ ಯಂತ್ರವು ರೋಗಿಗಳ ಸ್ಥಾನವನ್ನು ಉತ್ತಮಗೊಳಿಸಲು ಮತ್ತು ತಂತ್ರಜ್ಞರಿಗೆ ಸ್ಕ್ಯಾನಿಂಗ್ ಸಹಾಯವನ್ನು ನೀಡಲು ಕೃತಕ ಬುದ್ಧಿಮತ್ತೆ ಬಳಸು ತ್ತದೆ. ಆಂಬಿಯೆಂಟ್ ಮೋಡ್ ಲೈಟಿಂಗ್ ಮತ್ತು ಕಡಿಮೆ ಶಬ್ದವು ಸ್ಕಾನ್‌ನೊಂದಿಗೆ ರೋಗಿಗೆ ಸಕಾರಾತ್ಮಕ ಅನುಭವ ನೀಡುತ್ತದೆ.
ಇಂಟರ್ ಕನೆಕ್ಟೆಡ್ ಟ್ಯಾಬ್ಲೆಟ್ ಆಧಾರಿತ ನಿಯಂತ್ರಣಗಳು ಸ್ಕಾನ್‌ನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ದೋಷಗಳನ್ನು ತಪ್ಪಿಸುವು ದಲ್ಲದೆ, ಪ್ರಮಾಣೀಕೃತ ಫಲಿತಾಂಶಗಳನ್ನು ನೀಡುತ್ತದೆ.
ಹೃದಯದ ಆಂಜಿಯೋಗಾಮ್‌ನ್ನು ಕೇವಲ ಐ.ವಿ. ಚುಚ್ಚುಮದ್ದಿನೊಂದಿಗೆ ಒದಗಿಸಲು ಮತ್ತು ಕೆಲವೇ ಸೆಕೆಂಡುಗಳಲ್ಲಿ ಚಿತ್ರಗಳನ್ನು ಪಡೆದು ಕೊಳ್ಳಲು ಸಮರ್ಥವಾಗಿದೆ. ಯಂತ್ರವು ಡ್ಯುಯಲ್ ಎನರ್ಜಿ ಸ್ಕಾನಿಂಗ್ ಒಳಗೊಂಡಿದೆ. ಹೆಚ್ಚುವರಿ ಅಪ್ಲಿಕೇಶನ್‌ಗಳ ಮೂಲಕ ಕಲ್ಲುಗಳ ವಿಶ್ಲೇಷಣೆ ಮತ್ತು ಇತರ ಸಂಶೋಧನಾ ವಿಶ್ಲೇಷಣೆಗಳಿಗೆ ಅನುವು ಮಾಡಿಕೊಡುತ್ತದೆ. ಅಲ್ಟ್ರಾ ಲೋ ಡೋಸ್ ಶ್ವಾಸಕೋಶದ ಸ್ಕ್ಯಾನ್ ಪ್ರೋಟೋಕಾಲ್ ಬಳಸಿ ಎದೆಯ ಸಿ.ಟಿ. ಸ್ಕಾನ್ ಮಾಡುವುದರಿಂದ ಕೋವಿಡ್ ಯುಗದಲ್ಲಿ ಶ್ವಾಸಕೋಶದ ಒಳಗೊಳ್ಳುವಿಕೆಯನ್ನು ನಿರ್ಣ ಯಿಸಲು ಸಹಕಾರಿಯಾಗಿದೆ. ಈ ಯಂತ್ರವು ಕರ್ನಾಟಕದಲ್ಲಿ ಮೊದಲ ಮತ್ತು ಇಡೀ ದೇಶದಲ್ಲಿ ಲಭ್ಯವಿರುವ ಕೆಲವೇ ಘಟಕಗಳಲ್ಲಿ ಒಂದಾಗಿದೆ. 24x7 ಲಭ್ಯವಿರುವ ರೇಡಿಯೊ ಡಯಾಗ್ನೋಸಿಸ್ ವಿಭಾಗದಲ್ಲಿ ಅತ್ಯಾಧುನಿಕ ಯಂತ್ರವನ್ನು ಅಳವಡಿಸುವುದರೊಂದಿಗೆ ಆಸ್ಪತ್ರೆಯು ಅತ್ಯುನ್ನತ ರೋಗನಿರ್ಣಾಯಕ ಸಾಧನವನ್ನು ಸೇರಿಸಿದೆ.
ಸಿಟಿ ಸ್ಕ್ಯಾನರ್ ಉದ್ಘಾಟನೆ: ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ 128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರನ್ನು ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಶೆಟ್ಟಿ, ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಅಶೋಕ್ ಹೆಗ್ಡೆ, ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸೆಸ್‌ನ ಪ್ರಾಂಶುಪಾಲ ಡಾ.ನಿಲ್ಲನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







