ಜು. 28: ವಾಫಿ, ವಫಿಯ್ಯ ಪ್ರವೇಶ ಪರೀಕ್ಷೆ
ಮಲಪ್ಪುರಂ: ವಾಫಿ ಮತ್ತು ವಫಿಯ್ಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಜು.28ರಂದು ನಡೆಯಲಿದೆ. ಕರ್ನಾಟಕ ರಾಜ್ಯದ ವಿವಿಧ ಕೇಂದ್ರಗಳು, ಕೇರಳ ಮತ್ತು ವಿದೇಶಗಳಲ್ಲಿ ಪರೀಕ್ಷೆಯನ್ನು ಆನ್‌ಲೈನ್ ಮುಖಾಂತರ ನಡೆಸಲಾಗುವುದು.
ಬಾಲಕರ ವಾಫಿ ಪ್ರವೇಶ ಪರೀಕ್ಷೆ ಅಂದು ಬೆಳಗ್ಗೆ 10 ರಿಂದ 11:30 ರವರೆಗೆ ಮತ್ತು ಬಾಲಕಿಯರ ವಫಿಯ್ಯ ಪ್ರವೇಶ ಪರೀಕ್ಷೆ ಮಧ್ಯಾಹ್ನ 1:30 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದೆ. ಅರ್ಜಿಯನ್ನು ಸಲ್ಲಿಸಲು ಜು.22.ಕೊನೆಯ ದಿನಾಂಕವಾಗಿದೆ.
ಅಂತರಾಷ್ಟ್ರೀಯ ಇಸ್ಲಾಮಿಕ್ ಯೂನಿವರ್ಸಿಟೀಸ್ ಲೀಗ್ ಸದಸ್ಯತ್ವ ಹೊಂದಿರುವ ಸಿ.ಐ.ಸಿ ಗೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕದಲ್ಲಿ 90 ವಾಫಿ-ವಫಿಯ್ಯ ಕಾಲೇಜುಗಳಿವೆ. ಅರ್ಜಿಯನ್ನು ಆನ್‌ಲೈನ್‌ನಲ್ಲಿ www.wafyonline.com ಮೂಲಕ ಸಲ್ಲಿಸಬೇಕು. ಮಾಹಿತಿಗಾಗಿ 9632258526, 7619135073, 91488 94619ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





