ಝೀನತ್ ಬಕ್ಷ್ ಮಸೀದಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ

ಮಂಗಳೂರು, ಜು.17: ನಗರದ ಬಂದರ್‌ನಲ್ಲಿರುವ ಐತಿಹಾಸಿಕ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಶನಿವಾರ ಸೌಹಾರ್ದ ಭೇಟಿ ನೀಡಿದರು.
ಈ ಸಂದರ್ಭ ಮಸೀದಿಯ ಆಡಳಿತ ಸಮಿತಿಯ ವತಿಯಿಂದ ಕಮಿಷನರ್ ಅವರನ್ನು ಸನ್ಮಾನಿಸಲಾಯಿತು.
ಮಸೀದಿಯ ಉಪಾಧ್ಯಕ್ಷ ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಹಾಜಿ ಸೈಯದ್ ಭಾಷಾ ತಂಙಳ್, ಎಸ್‌ಎಂ ರಶೀದ್ ಹಾಜಿ, ಮುಹಮ್ಮದ್ ಅಶ್ರಫ್, ಅದ್ದು ಹಾಜಿ, ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತಿತರರು ಉಪಸ್ಥಿತರಿದ್ದರು.

Next Story





