ಉಡುಪಿ: ಜು.18ರಂದು ಗರ್ಭಿಣಿಯರು, ತಾಯಂದಿರಿಗೆ ಲಸಿಕೆ
ಉಡುಪಿ, ಜು.17: ರವಿವಾರ ಜು.18ರಂದು ಉಡುಪಿ ನಗರ ಪ್ರದೇಶದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಎಸ್ವಿಕೆ ಹಿರಿಯ ಪ್ರಾಥಮಿಕ ಶಾಲೆ ಮೂಡುಬೆಟ್ಟು ಕೊಡವೂರು ಇಲ್ಲಿ 45 ವರ್ಷ ಮೇಲ್ಟಟ್ಟ ಸಾರ್ವಜನಿಕರಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ, ವಿಕೇಲಚೇತನರಿಗೆ ಹಾಗೂ ಅವರ ಆರೈಕೆದಾರರಿಗೆ ಮತ್ತು ಸ್ಯಾಮ್,ಮ್ಯಾಮ್ ಮಕ್ಕಳ ಆರೈಕೆದಾರರಿಗೆ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ ಲಸಿಕೆ 250 ಡೋಸ್ ಲಭ್ಯವಿದೆ.
ಅಲ್ಲದೇ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೂ ಇಲ್ಲಿ ಲಸಿಕೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗ ಭೂಷಣ ಉಡುಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story