ಲಾಡರ್ ಮಗುಚಿ ಬಿದ್ದು ಮೃತ್ಯು
ಕಾಪು, ಜು.17: ಶಾಮಿಯಾನ ಬಿಚ್ಚುತ್ತಿರುವಾಗ ಲಾಡರ್ ಮಗುಚಿ ನೆಲಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.17ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಸತೀಶ್(42) ಎಂದು ಗುರುತಿಸಲಾಗಿದೆ. ಇವರು ಸ್ವಂತ ಶಾಮಿ ಯಾನ ಉದ್ಯಮ ಮಾಡಿಕೊಂಡಿದ್ದು, ಜು.15ರಂದು ಸರಕಾರಿ ಗುಡ್ಡೆಯ ಸುದರ್ಶನ ಎಂಬವರ ಮನೆಯ ಗೃಹಪ್ರವೆಶಕ್ಕೆ ಹಾಕಿದ್ದ ಶಾಮಿಯಾನವನ್ನು ಬಿಚ್ಚಲು ಜು.17ರಂದು ಹೋಗಿದ್ದರು. ಅಲ್ಲಿ ಶಾಮಿಯಾನ ಬಿಚ್ಚುತ್ತಿರುವಾಗ ಆಕಸ್ಮಿಕವಾಗಿ ಲಾಡರ್ ಮಗುಚಿ ಬಿದ್ದ ಕಾರಣ ಸತೀಶ ನೆಲಕ್ಕೆ ಬಿದ್ದರೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಸತೀಶ್, ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





