ಬಂಟ್ವಾಳ : ಹೊಳೆಗೆ ಬಿದ್ದು ಸಾವು
ಬಂಟ್ವಾಳ, ಜು.17: ಕಸಬಾ ಗ್ರಾಮದ ನಡುವಡ್ಕದಲ್ಲಿ ನಾಯ್ತೊಟ್ಟು ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಬಳಂತಿಮುಗೇರು ಶಾಲೆ ಸಮೀಪದ ನಿವಾಸಿ ಅವಿವಾಹಿತ ವಸಂತ ನಾಯ್ಕ (40) ಮೃತರಾಗಿದ್ದಾರೆ. ಹೊಳೆಗೆ ಕಾಲು ಜಾರಿ ಬಿದ್ದಿದ್ದು, ಮೃತ ದೇಹವನ್ನು ಪತ್ತೆ ಮಾಡಲಾಗಿದೆ.
ಸ್ಥಳ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮಕರಣಿಕರು ಪ್ರಕಾಶ್, ಗ್ರಾಮಸಹಾಯಕ ಲಿಂಗಪ್ಪ ಅವರು ಭೇಟಿ ನೀಡಿದರು.
ವಿಟ್ಲ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





