ತೆಲಂಗಾಣ: ತರಕಾರಿ ರೈತ ಸಂಗ್ರಹಿಸಿಟ್ಟಿದ್ದ 2 ಲಕ್ಷ ರೂ. ಇಲಿಗಳ ಪಾಲು

ಹೈದರಾಬಾದ್: ಮಹಬೂಬಾಬಾದ್ ಜಿಲ್ಲೆಯ ವೇಮುನೂರ್ ಗ್ರಾಮದ ತರಕಾರಿ ಕೃಷಿಕರೊಬ್ಬರು ಕಷ್ಟಪಟ್ಟು ಸಂಪಾದಿಸಿದ 2 ಲಕ್ಷ ರೂ.ಗಳ ಹಣವನ್ನು ಇಲಿಗಳು ಕಚ್ಚಿಹಾಕಿದ್ದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ತರಕಾರಿ ಮಾರಾಟಗಾರ ರೆಡ್ಯಾ ನಾಯಕ್ ತಮ್ಮ ಶಸ್ತ್ರಚಿಕಿತ್ಸೆಗಾಗಿ ಮನೆಯಲ್ಲಿ ಕಪಾಟಿನಲ್ಲಿ ಹಣವನ್ನು ಕೊಡಿಟ್ಟಿದ್ದರು.
ನಗದು ಹಣದ ಒಂದಷ್ಟು ಭಾಗವನ್ನು ತಮ್ಮ ಸಂಬಂಧಿಕರಿಂದ ಸಾಲ ಪಡೆದಿದ್ದರು.
ನಾಯಕ್ ತನ್ನ ದ್ವಿಚಕ್ರ ವಾಹನದಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು.
. “ಇದು ತರಕಾರಿಗಳನ್ನು ಮಾರಾಟ ಮಾಡಿದ ನಂತರ ನಾನು ಗಳಿಸಿದ ಉಳಿತಾಯವಾಗಿತ್ತು. ನಾನು ಕರೆನ್ಸಿ ನೋಟುಗಳನ್ನು ಹತ್ತಿ ಚೀಲದಲ್ಲಿ ಇಟ್ಟುಕೊಂಡಿದ್ದೆ. ನಾನು ಚೀಲವನ್ನು ತೆರೆದಾಗ, 500 ರೂಗಳ ಎಲ್ಲಾ ಕರೆನ್ಸಿ ನೋಟುಗಳನ್ನು ಇಲಿಗಳು ತಿಂದುಹಾಕಿದ್ದನ್ನು ನೋಡಿ ಆಘಾತಗೊಂಡಿದ್ದೇನೆ" ಎಂದು ನಾಯಕ್ ಹೇಳಿದ್ದಾರೆ.
Next Story





