ಬೈಕಂಪಾಡಿಯಲ್ಲಿ ಗುಡ್ಡ ಕುಸಿತ

ಮಂಗಳೂರು, ಜು.18: ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮನೆ, ಗಿಡ-ಮರ, ಕಟ್ಟಡ, ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಈ ನಡುವೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿದ ಘಟನೆ ರವಿವಾರ ನಡೆದಿದೆ.
ಬೈಕಂಪಾಡಿಯ ಆದಿ ಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿಗೆ ಹೊಂದಿಕೊಂಡಂತಿರುವ ಮಣ್ಣಿನ ಗುಡ್ಡ ಸಹಿತ ಕಾಂಕ್ರಿಟ್‌ನ ದೊಡ್ಡ ದೊಡ್ಡ ತುಂಡುಗಳು ಕೂಡ ಕುಸಿದಿವೆ. ಪರಿಣಾಮ ಇಂಟರ್‌ಲಾಕ್ ಇಂಡಸ್ಟ್ರಿಯ ಆವರಣದುದ್ದಕ್ಕೂ ಮಣ್ಣು ವಿಸ್ತರಿಸಿದ್ದು, ಅಪಾರ ಹಾನಿ ಸಂಭವಿಸಿದೆ.
‘ಗುಡ್ಡ ಕುಸಿತದಲ್ಲಿ ಬೃಹತ್ ಪ್ರಮಾಣದ ಇಂಟರ್‌ಲಾಕ್‌ಗೆ ಹಾನಿಯಾಗಿದೆ. ಜೊತೆಗೆ, 2000 ಬ್ಯಾಗ್ ಸಿಮೆಂಟ್, 50 ಲೋಡ್ ಮರಳು ಮಣ್ಣಿನಡಿ ಸಿಲುಕಿ ನಷ್ಟ ಸಂಭವಿಸಿದೆ. ಗುಡ್ಡ ಕುಸಿದ ಜಾಗದಲ್ಲಿ ಮತ್ತೊಂದು ಬೃಹತ್ ಪ್ರಮಾಣದ ಬಂಡೆ ಬೀಳುವ ಹಂತದಲ್ಲಿದ್ದು, ಭಾರೀ ಅಪಾಯವಿದೆ’ ಎನ್ನುತ್ತಾರೆ ಆದಿ ಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿಯ ಮಾಲಕ ಗೋಪಾಲ್ ಬಿ.ವಿ. ಅವರು.
ಘಟನಾ ಸ್ಥಳಕ್ಕೆ ಮನಪಾ ಸದಸ್ಯೆ ಸುಮಿತ್ರಾ, ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.












