ಜರ್ಮನಿಯಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 156ಕ್ಕೆ
ಯುರೋಪ್ ನಲ್ಲಿ ಕನಿಷ್ಠ 183 ಸಾವು

ಸಾಂದರ್ಭಿಕ ಚಿತ್ರ
ಬರ್ಲಿನ್, ಜು. 18: ಜರ್ಮನಿಯಲ್ಲಿ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಇದರೊಂದಿಗೆ ಪಶ್ಚಿಮ ಯುರೋಪ್ ನಲ್ಲಿ ಕಂಡುಬಂದಿರುವ ಪ್ರಾಕೃತಿಕ ವಿಕೋಪದಿಂದಾಗಿ ಮೃತಪಟ್ವವರ ಸಂಖ್ಯೆ ಕನಿಷ್ಠ 183 ಆಗಿದೆ.
ಪಶ್ಚಿಮ ಜರ್ಮನಿಯ ರೈನ್ಲ್ಯಾಂಡ್-ಪಲಟಿನೇಟ್ ರಾಜ್ಯವು ಪ್ರಾಕೃತಿಕ ವಿಕೋಪದ ಅತ್ಯಂತ ಕೆಟ್ಟ ಪರಿಣಾಮಕ್ಕೆ ಒಳಗಾಗಿದೆ. ಈ ರಾಜ್ಯವೊಂದರಲ್ಲೇ 110 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿಯಿದೆ’’ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ರಾಜ್ಯದಲ್ಲಿ ಸುಮಾರು 670 ಮಂದಿ ಗಾಯಗೊಂಡಿದ್ದಾರೆ.
ಯುರೋಪ್ ನ ಇನ್ನೊಂದು ದೇಶ ಆಸ್ಟ್ರಿಯದಲ್ಲೂ ಭಾರೀ ಮಳೆ ಮತ್ತು ಪ್ರವಾಹ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಸ್ಟ್ರಿಯದ ಸಾಲ್ಝ್ಬರ್ಗ್ ಮತ್ತು ಟೈರಾಲ್ ವಲಯಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ ಹಾಗೂ ಐತಿಹಾಸಿಕ ನಗರ ಹಲೇನ್ ಜಲಾವೃತವಾಗಿದೆ.
Next Story





