ಶುಂಠಿ ಗದ್ದೆಯಲ್ಲಿ ಗಾಂಜಾ ಪತ್ತೆ: ಆರೋಪಿ ಬಂಧನ

ಚಿಕ್ಕಮಗಳೂರು, ಜು.18: ಶುಂಠಿ ಗದ್ದೆಯ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಪ್ರಕರಣವೊಂದು ತಾಲೂಕಿನ ಹಿರೇಬಿದರೆ ಗ್ರಾಮದಲ್ಲಿ ವರದಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ಸಹಿತ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಿರೇಬಿದರೆ ಗ್ರಾಮದಲ್ಲಿ ಶುಂಠಿ ಬೆಳೆದಿದ್ದ ಚಿಕ್ಕಮಗಳೂರು ನಗರದ ನಿವಾಸಿ ಸುಬ್ರಹ್ಮಣಿ ಎಂಬಾತ ತಾನು ಬೆಳೆದ ಶುಂಠಿ ಬೆಳೆಯ ನಡುವೆಯೇ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಘಟಕದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, 14 ಗಿಡಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
Next Story





