ಉಡುಪಿ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಲಭ್ಯ
ಉಡುಪಿ, ಜು.19: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಜಿಲ್ಲೆಯಲ್ಲಿ ಲಭ್ಯವಿರುವ ಸಹಾಯಧನದ ವಿವರ ಈ ಕೆಳಗಿನಂತಿದೆ.
ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ: ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಬೆಳೆಗಳನ್ನು ನೂತನ ತಾಂತ್ರಿಕತೆಯೊಂದಿಗೆ ಹೊಸದಾಗಿ ಬೆಳೆಯುವ ರೈತರಿಗೆ ಸಹಾಯಧನವನ್ನು ವಿತರಿಸಲಾಗುವುದು. ಪ್ರತಿ ಫಲಾನುಭವಿ ಕನಿಷ್ಟ 0.20 ಹೆಕ್ಟೇರ್ ಹಾಗೂ ಗರಿಷ್ಟ 4.00 ಹೆಕ್ಟೇರ್‌ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನವು ಒಟ್ಟು ವೆಚ್ಚದ ಶೇ.40/50ರಂತೆ ಇದ್ದು, 2020-21ನೇ ಸಾಲಿಗೆ ಸಹಾಯಧನ ಪಡೆಯ ಬಹುದಾದ ಬೆಳೆಗಳು ಹಾಗೂ ಸಹಾಯಧನದ ವಿವರ ಹೀಗಿದೆ.
ಬಾಳೆ (ಕಂದುಗಳು) ಬೆಳೆಗೆ ಪ್ರತಿ ಹೆ.ನ 65,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 26,000 ರೂ. ಸಹಾಯಧನ, ಬಾಳೆ (ಅಂಗಾಂಶ ಕೃಷಿ) ಬೆಳೆಗೆ ಪ್ರತಿ ಹೆ.ನ1,02,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 40,800 ರೂ. ಸಹಾಯಧನ.ಅನಾನಸ್ಸು (ಕಂದುಗಳು) ಬೆಳೆಗೆ ಪ್ರತಿ ಹೆ.ನ87,500 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 35,000 ರೂ. ಸಹಾಯಧನ, ಹೈಬ್ರಿಡ್ ತರಕಾರಿಗಳ ಬೆಳೆಗೆ ಪ್ರತಿ ಹೆ.ನ 50,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 20,000 ರೂ. ಸಹಾಯಧನ.
ಬಿಡಿ ಹೂಗಳ ಬೆಳೆಗೆ ಪ್ರತಿ ಹೆ.ನ 40,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 16,000 ರೂ. ಸಹಾಯಧನ, ಕಾಳುಮೆಣಸು ಬೆಳೆಗೆ ಪ್ರತಿ ಹೆ.ನ 50,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 20,000 ರೂ. ಸಹಾಯಧನ, ಗೇರು/ಕೊಕ್ಕೊ ಬೆಳೆಗೆ ಪ್ರತಿ ಹೆ.ನ 50,000 ರೂ ವೆಚ್ಚಕ್ಕೆ ಪ್ರತಿ ಹೆ.ಗೆ 20,000 ರೂ. ಸಹಾಯ ಧನ, ಡ್ರ್ಯಾಗನ್ ಪ್ರೂಟ್ ಬೆಳೆಗೆ ಪ್ರತಿ ಹೆ.ನ 1,25,000 ರೂ. ವೆಚ್ಚಕ್ಕೆ ಪ್ರತಿಹೆ.ಗೆ 50,000 ರೂ. ಸಹಾಯಧನ ಹಾಗೂ ಮ್ಯಾಂಗೋಸ್ಟೀನ್/ರಾಮ್ ಬೂತಾನ್/ ಕೋಕಮ್ ಬೆಳೆಗೆ ಪ್ರತಿ ಹೆ.ನ 60,000 ರೂ. ವೆಚ್ಚಕ್ಕೆ ಪ್ರತಿ ಹೆ.ಗೆ 30,000 ರೂ. ಸಹಾಯಧನ ನೀಡಲಾಗುವುದು.
ಅಣಬೆ ಉತ್ಪಾದನಾ ಘಟಕಕ್ಕೆ ಸಹಾಯಧನ: ಬ್ಯಾಂಕ್‌ನಿಂದ ಅವಧಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಅಣಬೆ ಉತ್ಪಾದನಾ ಘಟಕಕ್ಕೆ ಒಟ್ಟು ವೆಚ್ಚದ ಶೇ.40ರಂತೆ ಗರಿಷ್ಟ 8ಲಕ್ಷ ರೂ. ಸಹಾಯಧನವನ್ನು ವಿತರಿಸಲಾಗುವುದು.
ಕಾಳು ಮೆಣಸು ಪುನಶ್ಚೇತನಕ್ಕೆ ಸಹಾಯಧನ: ಹಳೆಯ ಅನುತ್ಪಾದಕ ಕಾಳುಮೆಣಸು ತೋಟಗಳನ್ನು ಪುನಃಶ್ಚೇತನ ಕೈಗೊಳ್ಳುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಪ್ರತಿ ಹೆಕ್ಟೇರ್‌ಗೆ ಗರಿಷ್ಟ 10,000 ರೂ. ಸಹಾಯಧನ ವಿತರಿಸಲಾ ಗುವುದು. ಪ್ರತಿ ಫಲಾನುಭವಿಗೆ ಗರಿಷ್ಟ 2.00 ಹೆ.ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.
ಕೃಷಿ ಹೊಂಡಕ್ಕೆ ಸಹಾಯಧನ: 20ಮೀ.ಉದ್ದ, 20ಮೀ. ಅಗಲ ಹಾಗೂ 3ಮೀ. ಆಳದ ಕೃಷಿ ಹೊಂಡವನ್ನು ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಗರಿಷ್ಟ 75,000 ರೂ. ಸಹಾಯಧನ ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಸಹಾಯಧನ ಪಡೆಯಲು ರೈತರು 1.00 ಹೆ.ನಷ್ಟು ಜಮೀನು ಹೊಂದಿರಬೇಕು.
ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ: ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಖರೀದಿಸುವ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್‌ಗೆ ಸಹಾಯಧನ ನೀಡಲು ಅವಕಾಶವಿದ್ದು, ಸಣ್ಣ, ಅತಿ ಸಣ್ಣ, ಮಹಿಳಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಒಟ್ಟು ವೆಚ್ಚದ ಶೇ. 35ರಂತೆ ಗರಿಷ್ಟ 1 ಲಕ್ಷ ರೂ. ಹಾಗೂ ಇತರೆ ರೈತರು ಒಟ್ಟು ವೆಚ್ಚದ ಶೇ. 25ರಂತೆ ಗರಿಷ್ಟ 0.75 ಲಕ್ಷ ರೂ. ಸಹಾಯಧನವನ್ನು ಪ್ರಸಕ್ತ ಸಾಲಿನಲ್ಲಿ ಖರೀದಿಸಿ ನೊಂದಣಿ ಮಾುವ ರೈತರಿಗೆ ವಿತರಿಸಲಾಗುತ್ತದೆ.
ಪ್ಯಾಕ್ ಹೌಸ್‌ಗೆ ಸಹಾಯಧನ: 9ಮೀ. ಉದ್ದ ಹಾಗೂ 6 ಮೀ.ಅಗಲದ ಪ್ಯಾಕ್ ಹೌಸ್ ಅನ್ನು ಇಲಾಖಾ ಮಾರ್ಗಸೂಚಿಯಂತೆ ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಗರಿಷ್ಠ 2 ಲಕ್ಷ ರೂ. ಸಹಾಯಧನ ನೀಡಲಾ ಗುತ್ತದೆ. ಯೋಜನೆಯಡಿ ಸಹಾಯಧನ ಪಡೆಯಲು ರೈತರು ಕನಿಷ್ಟ 1.00 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಅಥವಾ 2.00 ಹೆಕ್ಟೇರ್‌ನಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಸುತ್ತಿರಬೇಕು.
ಸಹಾಯಧನ ಪಡೆಯುವ ವಿಧಾನ: ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ರೈತರು ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಗೆ ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಚಟುವಟಿಕೆ ಕೈಗೊಳ್ಳುವ ರೈತರ ವಿವರದೊಂದಿಗೆ ಹಾಗೂ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಲ್ಲಿ ಪ್ರಸ್ತಾವನೆ ಗಳನ್ನು ಸಲ್ಲಿಸಬೇಕು.
ತಾಲೂಕು ಹಾಗೂ ಜಿಲ್ಲೆಗೆ ನಿಗದಿಪಡಿಸಿದ ಗುರಿಗನುಗುಣವಾಗಿ ಜೇಷ್ಠತೆಯ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಾದೇಶ ನೀಡಲಾಗುತ್ತದೆ. ಕಾರ್ಯಾದೇಶ ಪಡೆದ ರೈತರು ನಿಗದಿತ ಚಟುವಟಿಕೆಗಳನ್ನು ಕೈಗೊಂಡು, ಕಾರ್ಯಾದೇಶದಲ್ಲಿ ನಮೂದಿ ಸಿರುವ ದಾಖಲಾತಿಗಳನ್ನು ಸಲ್ಲಿಸಿ, ಮಾರ್ಗಸೂಚಿ ಅನುಸಾರ ಸಹಾಯಧನ ಪಡೆಯಬಹುದುದು.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು ಉಡುಪಿ ದೂ.ಸಂ.: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ದೂ.ಸಂ: 0820-2522837, ಕುಂದಾಪುರ:ದೂ.ಸಂ. 08254-230813, ಕಾರ್ಕಳ ದೂ.ಸಂ.:08258-230288ನ್ನು ಸಂಪರ್ಕಿ ಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.







