ಕೋಲಾರ: ಬಡ್ತಿಗಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಪೊಲೀಸ್ ಪೇದೆ

ಕೋಲಾರ,ಜು.19 : ಉದ್ಯೋಗದಲ್ಲಿ ಬಡ್ತಿಗಾಗಿ ಪೊಲೀಸ್ ಪೇದೆಯೊಬ್ಬರು ಎಸೆಸೆಲ್ಸಿ ಪರೀಕ್ಷೆ ಬರೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ, ಕೋರಮಂಗಲ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆ ಆಗಿರುವ ಮಂಜುನಾಥ್, ಬಡ್ತಿ ಪಡೆಯಲು 10ನೇ ತರಗತಿ ಪಾಸ್ ಕಡ್ಡಾಯ ಇರೋದರಿಂದ ತಮ್ಮ 55ನೇ ವಯಸ್ಸಿನಲ್ಲಿ ಪರೀಕ್ಷೆಗೆ ಹಾಜರಿಯಾಗಿದ್ದಾರೆ.
ಕೋಲಾರ ನಗರದ ಕುರುಬರ ಪೇಟೆ ನಿವಾಸಿಯಾಗಿರುವ ಮಂಜುನಾಥ್ ಇಲ್ಲಿನ ಸರ್ಕಾರಿ ಜ್ಯುನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಎರಡನೇ ಬಾರಿಗೆ ಪರೀಕ್ಷೆಗೆ ಹಾಜರಾಗಿರುವ ಇವರು, ಈಗಾಗಲೇ ವಿಜ್ಞಾನ,ಹಿಂದಿ ಹಾಗೂ ಸಮಾಜ ವಿಜ್ಞಾನ ಪಾಸ್ ಮಾಡಿರುದ್ದಾರೆ. ಇದೀಗ ಕನ್ನಡ,ಇಂಗ್ಲೀಷ್, ಗಣಿತ ಪರೀಕ್ಷೆಯನ್ನು ಹೊಸ ಪರೀಕ್ಷಾ ಮಾದರಿಯಲ್ಲಿ ಬರೆದಿದ್ದಾರೆ.
Next Story





