ಸುರಂಗದಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು: ಕೊಂಕಣ ರೈಲ್ವೆ ಮಾರ್ಗದ ಸಂಚಾರ ಮತ್ತೆ ವ್ಯತ್ಯಯ

ಉಡುಪಿ, ಜು.19: ಕೊಂಕಣ ರೈಲು ಮಾರ್ಗದ ಹಳೆ ಗೋವಾ ಸುರಂಗದ ಕರ್ಮಾಲಿ ಹಾಗೂ ಥೀವಿಂ ನಿಲ್ದಾಣಗಳ ನಡುವೆ ಇಂದು ಮುಂಜಾನೆ 5:30ರ ಸುಮಾರಿಗೆ ನಿರಂತರ ಮಳೆಯಿಂದ ಕೆಸರು ಮಣ್ಣು ಹಾಗೂ ನೀರು ರೈಲು ಹಳಿಗಳ ಮೇಲೆ ಬಿದ್ದ ಕಾರಣ, ಹಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದ್ದು, ಕೆಲವನ್ನು ಭಾಗಶ: ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ. 01134 ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ದೈನಂದಿನ ವಿಶೇಷ ರೈಲಿನ ಜು.19ರ ಸಂಚಾರವನ್ನು ಮಡಗಾಂವ್ ಬಳಿಕ ಭಾಗಶ: ರದ್ದುಪಡಿಸಲಾಗಿದೆ. ಮಡಗಾಂವ್ ಜಂಕ್ಷನ್ ಹಾಗೂ ಕರ್ಮಾಲಿ ಯಿಂದ ಪ್ರಯಾಣಿಕರನ್ನು ರಸ್ತೆ ಮೂಲಕ ಥೀವಿಂ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ರಾತ್ರಿ 11:00ಕ್ಕೆ ರೈಲಿನ ಮೂಲಕ ಮುಂಬಯಿ ಸಿಎಸ್‌ಎಂಟಿಗೆ ಕಳುಹಿಸಿಕೊಡಲಾಗುತ್ತಿದೆ.
ರೈಲು ನಂ.01133 ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ದೈನಂದಿನ ವಿಶೇಷ ರೈಲು ಹಾಗೂ ನಂ.02619 ಲೋಕಮಾನ್ಯ ಟಿಲಕ್-ತಿಲಕ್ -ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲಿನ ಪ್ರಯಾಣಿಕರನ್ನು ಥೀವಿಂನಿಂದ ರಸ್ತೆ ಮೂಲಕ ಮಡಗಾಂವ್‌ಗೆ ಕರೆದೊಯ್ದು ಅಲ್ಲಿಂದ ಮಡಗಾಂವ್- ಮಂಗಳೂರು ಜಂಕ್ಷನ್/ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಕಳುಹಿಸಿಕೊಡಲಾಗುತ್ತಿದೆ.
ರೈಲು ನಂ.02620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ದೈನಂದಿನ ವಿಶೇಷ ರೈಲು ಇಂದು ಕರ್ಮಾಲಿವರೆಗೆ ಸಂಚರಿಸಲಿದ್ದು, ಅಲ್ಲಿಂದ ಪ್ರಯಾಣಿಕರನ್ನು ರಸ್ತೆ ಮೂಲಕ ಥೀವಿಂಗೆ ಕರೆದೊಯ್ದು, ಅಲ್ಲಿಂದ ರಾತ್ರಿ 9:00 ಗಂಟೆಗೆ ಲೋಕಮಾನ್ಯ ತಿಲಕ್ ನಿಲ್ದಾಣಕ್ಕೆ ತೆರಳಲಿದೆ.
ರೈಲು ನಂ.06345 ಲೋಕಮಾನ್ಯ ತಿಲಕ್- ತಿರುವನಂತಪುರ ಸೆಂಟ್ರಲ್ ‘ನೇತ್ರಾವತಿ’ ದೈನಂದಿನ ವಿಶೇಷ ರೈಲು ಹಾಗೂ ರೈಲು ನಂ.01150 ಪುಣೆ- ಎರ್ನಾಕುಲಂ ಜಂಕ್ಷನ್ ಸಾಪ್ತಾಹಿಕ ರೈಲುಗಳ ಪ್ರಯಾಣಿಕರನ್ನು ಥೀವಿಂನಿಂದ ಮಡಗಾಂವ್‌ಗೆ ರಸ್ತೆ ಮೂಲಕ ಕರೆದೊಯ್ದು, ಅಲ್ಲಿಂದ ಮಡಗಾಂವ್ ಜಂಕ್ಷನ್- ಎರ್ನಾಕುಲಂ ಜಂಕ್ಷನ್/ ತಿರುವನಂತಪುರಂ ಸೆಂಟ್ರಲ್ ರೈಲಿನಲ್ಲಿ ಕಳುಹಿಸಿ ಕೊಡಲಾಗುವುದು.
ರೈಲು ನಂ.06346 ತಿರುವನಂತಪುರಂ-ಲೋಕಮಾನ್ಯ ತಿಲಕ್ ‘ನೇತ್ರಾವತಿ’ ವಿಶೇಷ ರೈಲು ಜು.19ರ ಸಂಚಾರವನ್ನು ಶೋರನೂರು ಜಂಕ್ಷನ್, ಪಾಲ್ಘಾಟ್ ಜಂಕ್ಷನ್, ಈರೋಡ್ ಜಂಕ್ಷನ್, ಕೃಷ್ಣರಾಜಪುರಂ, ಹುಬ್ಬಳ್ಳಿ, ಮೀರಜ್ ಜಂಕ್ಷನ್, ಪುಣೆ ಜಂಕ್ಷನ್, ಪನ್ವೇಲ್ ಮೂಲಕ ಬದಲಿಸಲಾಗಿದೆ.
ಮುಂಬಯಿ ಸಿಎಸ್‌ಎಂಟಿ-ಮಡಗಾಂವ್ ಜಂಕ್ಷನ್ ನಡುವಿನ ‘ಕೊಂಕಣ ಕನ್ಯಾ’ ಹಾಗೂ ‘ಮಾಂಡೋವಿ’ ದೈನಂದಿನ ರೈಲುಗಳ ಸಂಚಾರವನ್ನು ಜು.19ಹಾಗೂ 20ರಂದು ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








