ಎಲ್ಲಾ ರಾಜ್ಯಗಳಿಗೂ ಕಾವೇರಿ ನದಿಯ ಪಾಲು ದಕ್ಕಬೇಕು: ಪುದುಚೇರಿ ಲೆಫ್ಟಿನೆಂಟ್ ಗವರ್ನರ್

ಪುದುಚೇರಿ, ಜೂ.19: ಕಾವೇರಿ ನದಿಪಾತ್ರದ ಎಲ್ಲಾ ರಾಜ್ಯಗಳಿಗೂ ಅದರ ಪಾಲಿನ ನದಿನೀರು ದೊರಕಬೇಕು ಎಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸಾಯ್ ಸೌಂದರರಾಜನ್ ಸೋಮವಾರ ಹೇಳಿದ್ದಾರೆ.
ಪುದುಕುಪ್ಪಮ್ನಲ್ಲಿ ನೀರಿನಿಂದ ಹೂಳು ತೆಗೆಯುವ ಖಾಸಗಿ ಸಂಸ್ಥೆಯ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕಾವೇರಿ ನದಿ ಪಾತ್ರದಲ್ಲಿರುವ ಮತ್ತು ನದಿ ನೀರನ್ನು ನೀರಾವರಿಗೆ ಬಳಸುತ್ತಿರುವ ಎಲ್ಲಾ ರಾಜ್ಯಗಳಿಗೂ ಅದರ ಪಾಲಿನ ನೀರು ಸೂಕ್ತ ಪ್ರಮಾಣದಲ್ಲಿ ದೊರಕಬೇಕು ಎಂದವರು ಹೇಳಿದರು.
ಕರ್ನಾಟಕ ಸರಕಾರ ರಾಮನಗರ ಜಿಲ್ಲೆಯಲ್ಲಿ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಯೋಜನೆಗೆ ತಮಿಳುನಾಡು ತೀವ್ರ ವಿರೋಧ ಸೂಚಿಸುತ್ತಿರುವ ಬಗ್ಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಪ್ರತಿಕ್ರಿಯಿಸುತ್ತಿದ್ದರು. ಪುದುಚೇರಿಯ ಕಾರೈಕಲ್ ಪಟ್ಟಣ ಕಾವೇರಿ ನದಿ ಹರಿವಿನ ತುತ್ತ ತುದಿಯಲ್ಲಿದ್ದು ಈ ನಗರ ನೀರಾವರಿಗೆ ಕಾವೇರಿ ನದಿ ನೀರನ್ನೇ ಆಶ್ರಯಿಸಿದೆ.
Next Story





