ಎನ್ಎಸ್ಎ ಅಡಿ ಮಣಿಪುರದ ಹೋರಾಟಗಾರನ ಬಂಧನ: ಪರಿಹಾರದ ಕುರಿತು ಮಣಿಪುರ ಸರಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ

ಹೊಸದಿಲ್ಲಿ, ಜು. 20: ರಾಜಕೀಯ ಹೋರಾಟಗಾರ ಲಿಚೋಂಬನ್ ಎರೆಂದ್ರೊ ಅವರಿಗೆ ಪರಿಹಾರ ನೀಡುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಣಿಪುರ ಸರಕಾರಕ್ಕೆ ಸೂಚಿಸಿದೆ. ಕೋವಿಡ್ನಿಂದ ಗುಣಮುಖರಾಗಲು ಗೋ ಮೂತ್ರ ಹಾಗೂ ಸೆಗಣಿ ಬಳಸುವಂತೆ ಬಿಜೆಪಿ ನಾಯಕರು ನೀಡಿದ ಹೇಳಿಕೆಯನ್ನು ಟೀಕಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಅನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಮೇ ತಿಂಗಳಿಂದ ಕೆಲವರು ತಮ್ಮ ಸ್ವಾತಂತ್ರವನ್ನು ಕಳೆದುಕೊಂಡಿರುವುದು ಗಂಭೀರ ವಿಷಯ. ವಶಕ್ಕೆ ಒಳಗಾಗಿದ್ದ ಎರೆಂದ್ರೊ ಅವರಿಗೆ ಪರಿಹಾರ ನೀಡುವಂತೆ ದೂರುದಾರರು ಮನವಿ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ರಾಜ್ಯ ಸರಕಾರಕ್ಕೆ ನೋಟಿಸು ನೀಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ ಹಾಗೂ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
Next Story





