ಉಡುಪಿ: ಈದ್ ನಮಾಝ್‌ಗೆ ಮಸೀದಿಗಳಲ್ಲಿ ಸಿದ್ಧತೆ
ಉಡುಪಿ, ಜು.28: ಕೋವಿಡ್ ಭೀತಿಯ ಮಧ್ಯೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಜು.21ರಂದು ಬಕ್ರೀದ್ ಹಬ್ಬದ ವಿಶೇಷ ನಮಾಝ್‌ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ವಕ್ಫ್ ನೋಂದಾಯಿತ 138 ಸೇರಿದಂತೆ ಒಟ್ಟು 180 ಮಸೀದಿಗಳಿದ್ದು, ಇಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಮಂದಿಯನ್ನು ಸೇರಿಸಿ ಸಾಮೂಹಿಕ ಈದ್ ನಮಾಝ್ ನಡೆಸಲಾಗುತ್ತದೆ. ಉಡುಪಿ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 7ಗಂಟೆಗೆ ಖತೀಬ್ ಮೌಲಾನ ರಶೀದ್ ಅಹ್ಮದ್ ನದ್ವಿ ಉಮ್ರಿ ಹಾಗೂ ಮೂಳೂರು ಜುಮಾ ಮಸೀದಿಯಲ್ಲಿ ಬೆಳಗ್ಗೆ 7.30ಕ್ಕೆ ಖತೀಬ್ ಅಲ್‌ಹಾಜ್ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನೆರವೇರಲಿದೆ.
ಅದೇ ರೀತಿ ಎಲ್ಲ ಮಸೀದಿಗಳಲ್ಲಿ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಪಾಡುವುದು ಕಡ್ಡಾಯಗೊಳಿಸಲಾಗಿದೆ. ಜನಸಂಖ್ಯೆ ಹೆಚ್ಚಿರುವ ಮಸೀದಿಗಳಲ್ಲಿ ಎರಡು ಹಾಗೂ ಮೂರು ಹಂತಗಳಲ್ಲಿ ಸಾಮೂಹಿಕ ನಮಾಝ್‌ಗಳನ್ನು ನಿರ್ವಹಿಸಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಮಸೀದಿ ವಠಾರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.





